ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ! | ಜನತಾ ನ್ಯೂಸ್

08 Dec 2021
582

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ರ್ಮೋರ್ಗನ್ಸ್ ಗೇಟ್ ಬಳಿಯ ಮೋರ್ಗನ್‌ಸ್ಟ್ರೀಟ್ ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ನಾಗೇಶ್ ಶೇರಿಗುಪ್ಪಿ, ಅವರ ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನಾ(8) ಮತ್ತು ಸಮರ್ಥ್(4) ಎಂದು ಗುರುತಿಸಲಾಗಿದೆ.

ನಾಗೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಆತ್ಮಹತ್ಯೆಗೂ ಮುನ್ನ ಪತ್ನಿ ಮತ್ತುಇಬ್ಬರು ಮಕ್ಕಳಿಗೆ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದ ಸುನಗ್ ಗ್ರಾಮದವರಾಗಿದ್ದಾರೆ. ನಾಗೇಶ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ನಾಗೇಶ್ ಬರೆದಿದ್ದೆನ್ನಲಾದ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ನೂರ್ ಜಹಾನ್ ಎಂಬ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ತನ್ನ ಪತ್ನಿ ವಿಜಯಲಕ್ಷ್ಮೀಯು ನೂರ್ ಜಹಾನ್ ಎಂಬ ಮಹಿಳೆ ಜೊತೆ ಜಾಸ್ತಿ ಸಂಪರ್ಕದಲ್ಲಿದ್ದಳು, ಅಲ್ಲದೆ ಮತಾಂತರ ಪ್ರಯತ್ನ ನಡೆದಿತ್ತು ಎಂದು ನಾಗೇಶ್ ಬರೆದಿಟ್ಟಿರುವ ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾನೆ. ಆದರೆ ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ವಿಜಯಲಕ್ಷ್ಮೀ ನೂರ್ ಜಹಾನ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಇದು ನಾಗೇಶ್ ಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಎಲ್ಲೂ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಬಿದ್ದಿರು ಅಂತ ಆತ ಪತ್ನಿಗೆ ಹೊಡೆಯುತ್ತಿದ್ದ ಎಂದು ತಿಳಿದುಬಂದಿದೆ

ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ತನ್ನ ಪತ್ನಿ ವಿಜಯಲಕ್ಷ್ಮಿ ಬೇರೆ ಧರ್ಮದ ಯುವತಿಯ ಜೊತೆ ಕೆಲಸ ಮಾಡುತ್ತಿದ್ದು, ಅವರು ಮತಾಂತರ ಮಾಡಲು ಆಕೆಯನ್ನು ಪ್ರಯತ್ನಿಸುತ್ತಿದ್ದರಂತೆ. ಆ ಕಾರಣಕ್ಕೆ ಕೃತ್ಯ ಎಸಗಿದ್ದೇನೆ ಎಂದು ಆತ ಡೆತ್​ನೋಟ್​ನಲ್ಲಿ ಬರೆದಿದ್ದಾನೆ ಎಂದು ತಿಳಿಸಿದರು.

ನಾಗೇಶ್ ಮತ್ತು ವಿಜಯಲಕ್ಷ್ಮೀ ಜೊತೆ ಆಗಾಗ ಜಗಳವಾಗುತ್ತಿದ್ದು, ಈ ಹಿಂದೆ ವಿಜಯಲಕ್ಷ್ಮಿ ಮನೆ ಬಿಟ್ಟು ಹೋಗಿದ್ದರು. ಈ ಕುರಿತಂತೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಇಬ್ಬರನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಲಾಗಿತ್ತು.

ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

RELATED TOPICS:
English summary :Mangalore

ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ! | ಜನತಾ ನ್ಯೂ&#
ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ! | ಜನತಾ ನ್ಯೂ&#
ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ  ₹1.48 ಕೋಟಿ ನಗದು, ಚಿನ್ನಾಭರಣ ವಶ | ಜನತಾ ನ್ಯೂ&#
ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ₹1.48 ಕೋಟಿ ನಗದು, ಚಿನ್ನಾಭರಣ ವಶ | ಜನತಾ ನ್ಯೂ&#
ಕಾಣೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ! | ಜನತಾ ನ್ಯೂ&#
ಕಾಣೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ! | ಜನತಾ ನ್ಯೂ&#
ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿದ ರಾಜ್ಯ ಸರ್ಕಾರ, ಹೊಸ ಉಸ್ತುವಾರಿ ಪಟ್ಟಿ ನೋಡಿ  | ಜನತಾ ನ್ಯೂ&#
ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿದ ರಾಜ್ಯ ಸರ್ಕಾರ, ಹೊಸ ಉಸ್ತುವಾರಿ ಪಟ್ಟಿ ನೋಡಿ | ಜನತಾ ನ್ಯೂ&#
ಸ್ವಾತಂತ್ರ್ಯದ ನಂತರ ರಾಷ್ಟ್ರದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು - ಪ್ರಧಾನಿ ಮೋದಿ | ಜನತಾ ನ್ಯೂ&#
ಸ್ವಾತಂತ್ರ್ಯದ ನಂತರ ರಾಷ್ಟ್ರದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು - ಪ್ರಧಾನಿ ಮೋದಿ | ಜನತಾ ನ್ಯೂ&#
ಬೆಂಗಳೂರಿನ ಟೌನ್ ಹಾಲ್ ಬಳಿ ಭೀಕರ ರಸ್ತೆ ಅಪಘಾತ: ಹಿರಿಯ ಪತ್ರಕರ್ತ ನಿಧನ | ಜನತಾ ನ್ಯೂ&#
ಬೆಂಗಳೂರಿನ ಟೌನ್ ಹಾಲ್ ಬಳಿ ಭೀಕರ ರಸ್ತೆ ಅಪಘಾತ: ಹಿರಿಯ ಪತ್ರಕರ್ತ ನಿಧನ | ಜನತಾ ನ್ಯೂ&#
ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ದರೋಡೆ! | ಜನತಾ ನ್ಯೂ&#
ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ದರೋಡೆ! | ಜನತಾ ನ್ಯೂ&#
ಪತ್ನಿಯ ಜತೆ ಮೊಬೈಲ್‌ನಲ್ಲಿ ಚಾಟ್‌ ಮಾಡ್ತಿದ್ದ ಯುವಕನ ಕೊಲೆಗೈದು ಮೃತದೇಹವನ್ನು ಸುಟ್ಟುಹಾಕಿದ ಪತಿ | ಜನತಾ ನ್ಯೂ&#
ಪತ್ನಿಯ ಜತೆ ಮೊಬೈಲ್‌ನಲ್ಲಿ ಚಾಟ್‌ ಮಾಡ್ತಿದ್ದ ಯುವಕನ ಕೊಲೆಗೈದು ಮೃತದೇಹವನ್ನು ಸುಟ್ಟುಹಾಕಿದ ಪತಿ | ಜನತಾ ನ್ಯೂ&#
24 ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢ, 19 ಮಂದಿ ಸಾವು | ಜನತಾ ನ್ಯೂ&#
24 ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢ, 19 ಮಂದಿ ಸಾವು | ಜನತಾ ನ್ಯೂ&#
ಸುಳ್ಳಿನ ಸಿದ್ಧಪುರುಷನಿಂದ ನಾವು ಭಾಷೆ-ಸಂಸ್ಕೃತಿ ಪಾಠ ಕಲಿಯಬೇಕೆ? | ಜನತಾ ನ್ಯೂ&#
ಸುಳ್ಳಿನ ಸಿದ್ಧಪುರುಷನಿಂದ ನಾವು ಭಾಷೆ-ಸಂಸ್ಕೃತಿ ಪಾಠ ಕಲಿಯಬೇಕೆ? | ಜನತಾ ನ್ಯೂ&#
ಪ್ರಿಯತಮೆ ಕೈ ಕೊಟ್ಟಳು, ಅಣ್ಣನನ್ನು ಅಪಹರಿಸಿದ ಪ್ರೇಮಿ: ಏಳು ಆರೋಪಿಗಳ ಬಂಧನ | ಜನತಾ ನ್ಯೂ&#
ಪ್ರಿಯತಮೆ ಕೈ ಕೊಟ್ಟಳು, ಅಣ್ಣನನ್ನು ಅಪಹರಿಸಿದ ಪ್ರೇಮಿ: ಏಳು ಆರೋಪಿಗಳ ಬಂಧನ | ಜನತಾ ನ್ಯೂ&#
ಬ್ಯಾಂಕ್ ಸಾಲ ತೀರಿಸಲು ಬ್ಯಾಂಕಿನಲ್ಲಿಯೇ ದರೋಡೆ ಮಾಡಿದ್ದ ಟೆಕ್ಕಿ ಅರೆಸ್ಟ್ | ಜನತಾ ನ್ಯೂ&#
ಬ್ಯಾಂಕ್ ಸಾಲ ತೀರಿಸಲು ಬ್ಯಾಂಕಿನಲ್ಲಿಯೇ ದರೋಡೆ ಮಾಡಿದ್ದ ಟೆಕ್ಕಿ ಅರೆಸ್ಟ್ | ಜನತಾ ನ್ಯೂ&#

ನ್ಯೂಸ್ MORE NEWS...