ನಾಯಿಗೆ ಬೈಕ್ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆ ದುರ್ಮರಣ! | Janata news

ಧಾರವಾಡ : ನಾಯಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ.
ಸಲಕಿನಕೊಪ್ಪದ ಬಳಿ ರಸ್ತೆಗೆ ನಾಯಿ ಅಡ್ಡ ಬಂದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕೂಲಿ ಕೆಲಸಕ್ಕೆಂದು ಧಾರವಾಡಕ್ಕೆ ಹೊರಟ್ಟಿದ್ದ ಮಹಿಳೆ ಪ್ರಕಾಶ್ ಎಂಬುವವ ಬೈಕ್ನಲ್ಲಿ ಡ್ರಾಪ್ ಕೇಳಿದ್ದರು. ಹಿಂಬದಿ ಕುಳಿತಿದ್ದ ಬೆನಕಟ್ಟಿ ಗ್ರಾಮದ 43 ವರ್ಷದ ದಿಲ್ ಶಾದ್ ಚಪ್ಪರಬಂದ್ ಸಾವನ್ನಪ್ಪಿದ್ದಾರೆ.
ಇನ್ನು ಬೈಕ್ ಸವಾರ ಸಹ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಡಿಕ್ಕಿಯ ರಭಸಕ್ಕೆ ನಾಯಿ ಸಹ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Dharwad