ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ: ಜಮೀರ್ ಗೆ ಕುಮಾರಸ್ವಾಮಿ ತಿರುಗೇಟು..! | ಜನತಾ ನ್ಯೂಸ್

24 Oct 2021
477

ಬೆಂಗಳೂರು : ಕುಮಾರಸ್ವಾಮಿ ಸೂಟ್ಕೇಸ್ ರಾಜಕಾರಣ ಮಾಡ್ತಿದ್ದಾರೆ ಎಂಬ ಜಮೀರ್ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆನೆ ಹೋಗುತ್ತಿದ್ದರೆ ನಾಯಿ ಬೊಗಳಿದರೆ ಏನಾಗುತ್ತದೆ? ಏನು ಆಗಲ್ಲ. ಆನೆ ದಾರಿ ಆನೆಗೆ. ಜಮೀರ್ ಟೀಕೆಗೆ ಉತ್ತರ ಕೊಡಲು ಅನ್ ಫಿಟ್ ಎಂದು ಜಮೀರ್‌ರನ್ನು ನಾಯಿಗೆ ಹೋಲಿಸಿದ್ದಾರೆ.

ಆನೆ ಹೋಗುವಾಗ ನಾಯಿ ಬೊಗಳುತ್ತೆ. ಆದ್ರೆ ಆನೆಗೆ ಏನಾದರೂ ಆಗುತ್ತಾ..? ನನ್ನ ಬದುಕಿನ ಬಗ್ಗೆ ಇವರಿಗೇನು ಗೊತ್ತು. ನನ್ನ ಬ್ಯಾಗ್ರೌಂಡ್ ಬಗ್ಗೆ ಏನು ಗೊತ್ತು. ನನ್ನ ಸ್ವಂತ ದುಡಿಮೆಯಿಂದ ನನ್ನ ಬದುಕು ಕಟ್ಟಿಕೊಂಡಿದ್ದೇನೆ.

ಓದುವಾಗ ಕಸದ ಟೆಂಡರ್ ಪಡೆದು ದುಡಿಮೆ ಮಾಡುತ್ತಿದ್ದೆ. ಚಿತ್ರದ ಹಂಚಿಕೆ ಮಾಡುತ್ತಿದ್ದೆ. ದೇವೇಗೌಡರ ಹೆಸರು ಬಳಸಿಕೊಂಡು ಹೇಗಾದರೂ ಹಣ ಸಂಪಾದಿಸಬಹುದಿತ್ತು. ಆದರೆ ನಾನು ಹಾಗೇ ಮಾಡಲಿಲ್ಲ. ಅವತ್ತು ಇವರೆಲ್ಲಾ ಎಲ್ಲಿ ಹೋಗಿದ್ರು ಅಂತ ಪ್ರಶ್ನಿಸಿದ್ದಾರೆ.

ನಾನು ಕಾಲೇಜಿನಲ್ಲಿ ಓದುತ್ತಿರುವಾಗ ನಾಲ್ಕು ವಾರ್ಡ್​ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ ಕೆಲಸ ಮಾಡಿದೆ. ನಾನು ನನ್ನ ತಂದೆ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಜೆಡಿಎಸ್​​​ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಉಪಚುನಾವಣೆಯಲ್ಲಿ 5 ದಿನಗಳ ಕಾಲ ಪ್ರಚಾರ ಮಾಡಿದ್ದೇನೆ. ಸಾಲ ಮನ್ನಾ ಮಾಡುವುದಕ್ಕೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಭಾಗ್ಯ ಕಾರ್ಯಕ್ರಮಗಳನ್ನ ನಿಲ್ಲಿಸಬಾರದು, ಬಜೆಟ್​ ಬೇಡ, ಬಜೆಟ್ ಮಂಡನೆ ಮಾಡಬಾರದು ಎಂದೆಲ್ಲಾ ಹೇಳಿದರು. ಕಾಂಗ್ರೆಸ್​​ ಜೊತೆ ಮೈತ್ರಿಯಿಂದ ಪಕ್ಷಕ್ಕೆ ಬಹಳ ಹಾನಿ ಆಗಿದೆ. ನಮಗೆ ಶಕ್ತಿ ಇದ್ದ ಕಡೆ ಹಿನ್ನಡೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜೆಡಿಎಸ್ ನಲ್ಲಿ ದೊಡ್ಡ ನಾಯಕರಿಲ್ಲ.. ನಮ್ಮಲ್ಲಿ ಕಾರ್ಯಕರ್ತರೇ ನಾಯಕರು. ನಾಳೆ ಪುನಃ ಹಾನಗಲ್, ಸಿಂಧಗಿಗೆ ಹೋಗ್ತೇನೆ. 20 ಬೈ ಎಲೆಕ್ಷನ್ ನಡೆದಿದೆ.. ಎಲ್ಲದರಲ್ಲೂ ಪಕ್ಷ ಸೋತಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು. ಭದ್ರಕೋಟೆಯಂಥ ಕ್ಷೇತ್ರದಲ್ಲೂ ಜೆಡಿಎಸ್ ಸೋತಿದೆ. ನಾನೀಗ ತಳಮಟ್ಟದಿಂದ ಪಕ್ಷ ಕಟ್ಟಬೇಕಿದೆ. ನನಗೆ ಆದ ಅವಮಾನ ಮುಂದಿನ ಚುನಾವಣೆಯಲ್ಲಿ ಸಿಗುವ ಗೆಲುವೇ ಉತ್ತರ ಎಂದಿದ್ದಾರೆ.

ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಮಗನ ಬದಲು ಬೇರೆಯವರಿಗೆ ಕೊಡಬೇಕಿತ್ತು. ಬೇರೆ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಟಿಕೆಟ್​ ಕೊಡಬೇಕಿತ್ತು. ವರುಣಾ ಕ್ಷೇತ್ರದಲ್ಲಿ ಯಾರೂ ಕಾರ್ಯಕರ್ತರೇ ಇರಲಿಲ್ಲವಾ? ಸಿದ್ದರಾಮಯ್ಯನವರಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರು ಕಾಣಲಿಲ್ವಾ? ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರಾ, ನಿಮ್ಮದು ಯಾವುದು? ಎಲ್ಲರ ಮನೆ ದೋಸೆನೂ ತೂತೆ, ಇದನ್ನ ತಿಳಿದುಕೊಳ್ಳಬೇಕು ಅಂತ ಕುಮಾರಸ್ವಾಮಿ ಹೇಳಿದ್ದಾರೆ.

RELATED TOPICS:
English summary :HD Kumaraswamy

ಸಿಡಿಎಸ್ ಬಿಪಿನ್ ರಾವತ್ ಸಾವಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಗಣ್ಯಾತಿಗಣ್ಯರ ಕಂಬನಿ | ಜನತಾ ನ್ಯೂ&#
ಸಿಡಿಎಸ್ ಬಿಪಿನ್ ರಾವತ್ ಸಾವಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಗಣ್ಯಾತಿಗಣ್ಯರ ಕಂಬನಿ | ಜನತಾ ನ್ಯೂ&#
ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ | ಜನತಾ ನ್ಯೂ&#
ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ | ಜನತಾ ನ್ಯೂ&#
ಸೇನಾ ಹೆಲಿಕಾಪ್ಟರ್ ಪತನ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ | ಜನತಾ ನ್ಯೂ&#
ಸೇನಾ ಹೆಲಿಕಾಪ್ಟರ್ ಪತನ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ | ಜನತಾ ನ್ಯೂ&#
ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ! | ಜನತಾ ನ್ಯೂ&#
ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ! | ಜನತಾ ನ್ಯೂ&#
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ! | ಜನತಾ ನ್ಯೂ&#
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ! | ಜನತಾ ನ್ಯೂ&#
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ | ಜನತಾ ನ್ಯೂ&#
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ | ಜನತಾ ನ್ಯೂ&#
ಕೋವಿಡ್-19 ನಿಯಂತ್ರಣಕ್ಕೆ ಸಿಎಂ ಅಧ್ಯಕ್ಷತೆ ಮಹತ್ವದ ಸಭೆ : ರಾಜ್ಯಾದ್ಯಂತ 299 ಹೊಸ ಕೋವಿಡ್-19 ಪ್ರಕರಣ | ಜನತಾ ನ್ಯೂ&#
ಕೋವಿಡ್-19 ನಿಯಂತ್ರಣಕ್ಕೆ ಸಿಎಂ ಅಧ್ಯಕ್ಷತೆ ಮಹತ್ವದ ಸಭೆ : ರಾಜ್ಯಾದ್ಯಂತ 299 ಹೊಸ ಕೋವಿಡ್-19 ಪ್ರಕರಣ | ಜನತಾ ನ್ಯೂ&#
ರಷ್ಯಾದ ಅಧ್ಯಕ್ಷ ಪುಟಿನ್ ಭಾರತ ಭೇಟಿ ವಿಶೇಷತೆ ಹಾಗೂ ಮಹತ್ವಗಳು | ಜನತಾ ನ್ಯೂ&#
ರಷ್ಯಾದ ಅಧ್ಯಕ್ಷ ಪುಟಿನ್ ಭಾರತ ಭೇಟಿ ವಿಶೇಷತೆ ಹಾಗೂ ಮಹತ್ವಗಳು | ಜನತಾ ನ್ಯೂ&#
ಶಾಲಾ ಬಸ್​ ಅಪಘಾತ, 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ | ಜನತಾ ನ್ಯೂ&#
ಶಾಲಾ ಬಸ್​ ಅಪಘಾತ, 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ | ಜನತಾ ನ್ಯೂ&#
ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ! | ಜನತಾ ನ್ಯೂ&#
ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ! | ಜನತಾ ನ್ಯೂ&#
ಜೆಡಿಎಸ್ ಜತೆ ಹೋಗ್ತೀವಿ ಎನ್ನುವ ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ | ಜನತಾ ನ್ಯೂ&#
ಜೆಡಿಎಸ್ ಜತೆ ಹೋಗ್ತೀವಿ ಎನ್ನುವ ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ | ಜನತಾ ನ್ಯೂ&#
ಬೈಕ್​ ಸವಾರನ ಮೇಲೆ ಟ್ಯಾಂಕರ್ ಹರಿದು ವ್ಯಕ್ತಿ ಸಾವು | ಜನತಾ ನ್ಯೂ&#
ಬೈಕ್​ ಸವಾರನ ಮೇಲೆ ಟ್ಯಾಂಕರ್ ಹರಿದು ವ್ಯಕ್ತಿ ಸಾವು | ಜನತಾ ನ್ಯೂ&#

ನ್ಯೂಸ್ MORE NEWS...