Mon,Jun24,2024
ಕನ್ನಡ / English

ಕೊಲೆ ಪ್ರಕರಣ : ನ್ಯಾಯಾಲಯದಲ್ಲಿ ಗಳಗಳನೆ ಕಣ್ಣೀರು ಇಟ್ಟ ದರ್ಶನ ; ಪೊಲೀಸ್ ಕಸ್ಟಡೀಗೆ ನೀಡಲಾಗಿದೆ | JANATA NEWS

11 Jun 2024
382

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇಂದು ಅವರನ್ನು ಬೆಂಗಳೂರಿನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.

ನ್ಯಾಯಾದೀಶರ ಎದುರು ಎ.1 ಆರೋಪಿ ಪವಿತ್ರಾ ಹಾಗೂ ಎ.2 ಆರೋಪಿ ದರ್ಶನ ಗಳಗಳನೆ ಕಣ್ಣೀರು ಇಟ್ಟರು ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನ ಕೋರ್ಟ್‌ಗೆ ಈ ಸಂದರ್ಭದಲ್ಲಿ ಹಾಜರಾಗಿದ್ದರು.

ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ದರ್ಶನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಟ ದರ್ಶನ, ಸೇರಿದಂತೆ 13 ಜನರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ, ಎನ್ನಲಾಗಿದೆ.

ನ್ಯಾಯಾಧೀಶರು ವಾದ ಪ್ರತಿವಾದನವನ್ನು ಆಲಿಸಿ ನಟ ದರ್ಶನ್‌ರನ್ನು ಆರು ದಿನ ಪೋಲಿಸ್‌ ಕಸ್ಟಡಿಗೆ ನೀಡಿದ್ದಾರೆ. ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಇಂದು ಬೆಳಗಿನ ಜಾವ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಎರಡು ದಿನಗಳ ಹಿಂದೆ ನಗರದ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಅಪರಿಚಿತ ಮೃತ ದೇಹ ಸಿಕ್ಕಿದ್ದು, ಈ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದರ್ಶನ ಪರ ವಕೀಲ 14 ದಿನ ಪೊಲೀಸ್‌ ಕಸ್ಟಡಿಗೆ ಏಕೆ ಬೇಕು. ಈಗಾಗಲೇ ದರ್ಶನ ಮೊಬೈಲ್ ಸೀಜ್ ಆಗಿದೆ. ಅವರಿಗೆ ಕಿರುಕುಳ ನೀಡಬಾರದು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿಯನ್ನು ಸಹ ಮಾಡಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಶನಿವಾರ ರಾತ್ರಿ ಸುಮನಹಳ್ಳಿ ಸೇತುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದರ್ಶನ್‌ಗೆ ಆತ್ಮೀಯರಾಗಿರುವ ನಟಿ ಪವಿತ್ರಾ ಗೌಡ ಅವರಿಗೆ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು ಎಂದು ವರದಿಗಳು ಹೇಳಿವೆ.

English summary :Murder case: Darshan broke down in tears in the court ; given to police custody

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ದೆಹಲಿ ಸಿಎಂ ಕೇಜ್ರಿವಾಲ್
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ದೆಹಲಿ ಸಿಎಂ ಕೇಜ್ರಿವಾಲ್
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ
ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಜಾಮೀನು ಆದೇಶವನ್ನು ತಡೆಹಿಡಿದ ದೆಹಲಿ ಹೈಕೋರ್ಟ್
ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಜಾಮೀನು ಆದೇಶವನ್ನು ತಡೆಹಿಡಿದ ದೆಹಲಿ ಹೈಕೋರ್ಟ್
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ : ಪತ್ರಕರ್ತ ಭಾರ್ತಿಗೆ  ಸಮನ್ಸ್ ನೀಡಲು ಬೆಂಗಳೂರಿನಿಂದ ನೋಯ್ಡಾಕ್ಕೆ ಹೋದ ಮೂವರು ಪೊಲೀಸರ ತಂಡ
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ : ಪತ್ರಕರ್ತ ಭಾರ್ತಿಗೆ ಸಮನ್ಸ್ ನೀಡಲು ಬೆಂಗಳೂರಿನಿಂದ ನೋಯ್ಡಾಕ್ಕೆ ಹೋದ ಮೂವರು ಪೊಲೀಸರ ತಂಡ
ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌,  ಎತ್ತಿನಗಾಡಿ ಮೇಲೇರಿ ಪ್ರತಿಭಟನೆ
ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ
ನಗರದಲ್ಲಿ ನೀರಿನ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ
ನಗರದಲ್ಲಿ ನೀರಿನ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ
ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ದರ್ಶನ್ ಅರೆಸ್ಟ್ , ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್
ದರ್ಶನ್ ಅರೆಸ್ಟ್ , ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್
ರೇಣುಕಾಸ್ವಾಮಿ ಹತ್ಯೆ ಕೇಸ್ ನ ‌ ಪೋಸ್ಟ್‌ ಮಾರ್ಟಮ್  ವರದಿ, ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು!
ರೇಣುಕಾಸ್ವಾಮಿ ಹತ್ಯೆ ಕೇಸ್ ನ ‌ ಪೋಸ್ಟ್‌ ಮಾರ್ಟಮ್ ವರದಿ, ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು!
ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?
ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?

ನ್ಯೂಸ್ MORE NEWS...