Sun,Jun23,2024
ಕನ್ನಡ / English

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್‌ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ | JANATA NEWS

15 Jun 2024
384

ಬೆಂಗಳೂರು : ರಾಜ್ಯ ಸರ್ಕಾರವು 29.84% ಮತ್ತು 18.44% ರಷ್ಟು ಮಾರಾಟ ತೆರಿಗೆಯನ್ನು ಪರಿಷ್ಕರಿಸಿದ ಕಾರಣ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಕ್ರಮವಾಗಿ 3 ಮತ್ತು ರೂ 3.05 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ವಿರೋಧ ಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಬಿಜೆಪಿ, "ಕನ್ನಡಿಗರಿಗೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್!!"

"ಪೆಟ್ರೋಲ್‌ ಬೆಲೆ ಪ್ರತಿ ಲೀ. ಗೆ ₹3 ಹಾಗೂ ಡಿಸೇಲ್‌ ಬೆಲೆ ಪ್ರತಿ ಲೀ.ಗೆ ₹3.50 ಯನ್ನು ಏಕಾಏಕಿ ಹೆಚ್ಚಿಸಿದೆ ರಾಜ್ಯ ಕಾಂಗ್ರೆಸ್‌ ಸರ್ಕಾರ."

"ಸಿಎಂ ಸಿದ್ದರಾಮಯ್ಯ ಅವರೇ, ಪೆಟ್ರೋಲಿಯಂ ಕಚ್ಚಾತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ಮೇಲಾಗಿ ನೀವೇ ಹೇಳಿದಂತೆ ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ, ಕರ್ನಾಟಕ ದಿವಾಳಿ ಸಹ ಆಗಿಲ್ಲ, ಅಂದ ಮೇಲೆ ದಿಢೀರ್‌ ಅಂತ ಈ ಬೆಲೆಯೇರಿಕೆ ಯಾವ ಪುರುಷಾರ್ಥಕ್ಕೆ..??"

"ನಿಮಗೆ ನಿಜಕ್ಕೂ ಬಡವರ ಮೇಲೆ ಕಾಳಜಿ ಇದ್ದರೆ, ಕೂಡಲೇ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಲು ಸಿದ್ದವಾಗಿ.", ಎಂದು ರಾಜ್ಯ ಬಿಜೆಪಿ ಎಚ್ಚರಿಸಿದೆ.

ಕರ್ನಾಟಕ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಮಾತನಾಡಿ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರವನ್ನು ಸಿಎಂ ಮತ್ತು ಸರ್ಕಾರ ಹಿಂಪಡೆಯದಿದ್ದರೆ ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಇಂಧನ ಬೆಲೆ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ.", ಎಂದು ಹೇಳಿದ್ದಾರೆ.

English summary :State Congress govt hiked petrol and diesel prices suddenly in Karnataka: BJP has warned of violent protests across the state

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ದೆಹಲಿ ಸಿಎಂ ಕೇಜ್ರಿವಾಲ್
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ದೆಹಲಿ ಸಿಎಂ ಕೇಜ್ರಿವಾಲ್
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ
ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಜಾಮೀನು ಆದೇಶವನ್ನು ತಡೆಹಿಡಿದ ದೆಹಲಿ ಹೈಕೋರ್ಟ್
ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಜಾಮೀನು ಆದೇಶವನ್ನು ತಡೆಹಿಡಿದ ದೆಹಲಿ ಹೈಕೋರ್ಟ್
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ : ಪತ್ರಕರ್ತ ಭಾರ್ತಿಗೆ  ಸಮನ್ಸ್ ನೀಡಲು ಬೆಂಗಳೂರಿನಿಂದ ನೋಯ್ಡಾಕ್ಕೆ ಹೋದ ಮೂವರು ಪೊಲೀಸರ ತಂಡ
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ : ಪತ್ರಕರ್ತ ಭಾರ್ತಿಗೆ ಸಮನ್ಸ್ ನೀಡಲು ಬೆಂಗಳೂರಿನಿಂದ ನೋಯ್ಡಾಕ್ಕೆ ಹೋದ ಮೂವರು ಪೊಲೀಸರ ತಂಡ
ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌,  ಎತ್ತಿನಗಾಡಿ ಮೇಲೇರಿ ಪ್ರತಿಭಟನೆ
ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ
ನಗರದಲ್ಲಿ ನೀರಿನ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ
ನಗರದಲ್ಲಿ ನೀರಿನ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ
ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ದರ್ಶನ್ ಅರೆಸ್ಟ್ , ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್
ದರ್ಶನ್ ಅರೆಸ್ಟ್ , ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್
ರೇಣುಕಾಸ್ವಾಮಿ ಹತ್ಯೆ ಕೇಸ್ ನ ‌ ಪೋಸ್ಟ್‌ ಮಾರ್ಟಮ್  ವರದಿ, ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು!
ರೇಣುಕಾಸ್ವಾಮಿ ಹತ್ಯೆ ಕೇಸ್ ನ ‌ ಪೋಸ್ಟ್‌ ಮಾರ್ಟಮ್ ವರದಿ, ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು!
ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?
ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?

ನ್ಯೂಸ್ MORE NEWS...