ಅರಣ್ಯ ಇಲಾಖೆ ಭದ್ರತಾ ಸಿಬ್ಬಂದಿ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ | Janata news
ಗಂಗಾವತಿ : ಗಂಗಾವತಿಯ ಅರಣ್ಯ ಇಲಾಖೆ ಭದ್ರತಾ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.18ರಂದು ನಡೆದಿದೆ.
ಮೃತ ನೌಕರನನ್ನು ಟಿ.ಮಲ್ಲಿಕಾರ್ಜುನ (59) ಎಂದು ಗುರುತಿಸಲಾಗಿದೆ. ಕಳೆದ 37 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಇವರು ಇದೇ ವರ್ಷ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು.
ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿರುವ ಮಲ್ಲಿಕಾರ್ಜುನ, ಸೋಮವಾರ ಬೆಳಗಿನ ಜಾವ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸರಕಾರ ಕೂಡಲೇ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡವರನ್ನು ಖಾಯಂ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗಂಗಾವತಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Koppala