ರಾಜ್ಯದಲ್ಲಿ ಕೊರೊನಾ ಚೈನ್ ಲಿಂಕ್ ಮುರಿಯಲು ಲಾಕ್ ಡೌನ್ ಅಗತ್ಯ | ಜನತಾ ನ್ಯೂಸ್
ರಾಯಚೂರು : ರಾಜ್ಯದಲ್ಲಿ ಕೊರೊನಾ ವೈರಸ್ ಚೈನ್ ಲಿಂಕ್ ತಪ್ಪಿಸಲು ಲಾಕ್ ಡೌನ್ ಅಗತ್ಯವಾಗಿದೆ. ಲಾಕ್ ಡೌನ್ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ ಕೊರೊನಾದ ಚೈನ್ ಲಿಂಕ್ ತಪ್ಪಿಸಲು ಸಂಚಾರ ಸ್ತಬ್ಧವಾಗಬೇಕಿದೆ. ಜನರ ಅನಾವಶ್ಯಕ ಓಡಾಟ, ಸಭೆ, ಸಮಾರಂಭಗಳನ್ನ ಬಂದ್ ಮಾಡಬೇಕಿದೆ ಎಂದರು.
ಲಾಕ್ಡೌನ್ ಎಂದು ಕರೆಯದಿದ್ದರೂ, ಸರ್ಕಾರ ವಿಧಿಸಿರೋ ನಿಯಮಗಳು ಲಾಕ್ಡೌನ್ ಸ್ವರೂಪದಲ್ಲಿಯೇ ಇವೆ. ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಸವದಿ ಮನವಿ ಮಾಡಿದರು.
RELATED TOPICS:
English summary :Laxman Savadi