ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! | ಜನತಾ ನ್ಯೂಸ್
ಹಾವೇರಿ : ಕೊರೊನಾ ಸೋಂಕಿಗೆ ತುತ್ತಾಗಿ ತಾಯಿ-ಮಗ ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದಿದೆ.
ಕೊರೊನಾಕ್ಕೆ ಬಲಿಯಾದ ತಾಯಿ, ಮಗನನ್ನು ಲಲಿತವ್ವ ಬನ್ನಿಹಟ್ಟಿ (50) ಮತ್ತು ನಾಗರಾಜ್ ಬನ್ನಿಹಟ್ಟಿ (30) ಎಂದು ಗುರುತಿಸಲಾಗಿದೆ.
ನಾಗರಾಜ್ ಅವರು ಚಿಕ್ಕಣಜಿ ಗ್ರಾಮದ ಹೆಸ್ಕಾಂ ನೌಕರನಾಗಿದ್ದ. ಇವರಿಬ್ಬರಿಗೂ ಇತ್ತೀಚಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ತಾಯಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾವಣಗೆರೆ ಆಸ್ಪತ್ರೆಯಲ್ಲಿ ಮಗ ಚಿಕಿತ್ಸೆ ಪಡೆಯುತ್ತಿದ್ದ.
ಚಿಕಿತ್ಸೆ ಫಲಿಸದೆ ತಾಯಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಇತ್ತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗನೂ ಡಾವಣಗೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇಂದು ಬೆಳಗ್ಗೆ ಇವರಿಬ್ಬರ ಮೃತದೇಹವನ್ನು ಸ್ವಗ್ರಾಮದಲ್ಲಿ ಒಂದೇ ಚಿತೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ.