ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂಸ್
ಕೋಲಾರ : ತಂದೆಯ ತಲೆಯನ್ನ ಪಾಪಿ ಮಗನೊಬ್ಬ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಶ್ರೀನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ.
ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮೃತ ದುರ್ದೈವಿ. ನವೀನ್ ತಂದೆಯನ್ನು ಕೊಲೆ ಮಾಡಿದ ಆರೋಪಿ. ನವೀನ್ ಮತ್ತು ವೆಂಕಟೇಶ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ತಡರಾತ್ರಿ ನವೀನ್ ಮನೆಯಲ್ಲಿದ್ದ ರುಬ್ಬುವ ಗುಂಡಿನಿಂದ ತಲೆಗೆ ಹೊಡೆದು ವೆಂಕಟೇಶ್ ಅವರನ್ನು ಕೊಲೆ ಮಾಡಿದ್ದಾನೆ.
ಇದೇ ಸಿಟ್ಟಿನಲ್ಲಿ ಮಲಗಿದ್ದ ತಂದೆಯ ತಲೆ ಮೇಲೆ ಅಡುಗೆ ಮನೆಯಲ್ಲಿದ್ದ ರುಬ್ಬುವ ಗುಂಡುಕಲ್ಲನ್ನು ಎತ್ತಿ ಹಾಕಿ ನವೀನ್ ಕೊಲೆ ಮಾಡಿದ್ದಾನೆ. ತಲೆಗೆ ರುಬ್ಬುವ ಗುಂಡುನಿಂದ ಹೊಡೆದ ಪರಿಣಾಮ ವೆಂಕಟೇಶ್ ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳೀಯರು ನವೀನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.