ಮೀನು ಸಾಗಣೆ ಲಾರಿಯಲ್ಲಿ ಗೋಮಾಂಸ ಸಾಗಾಟ: ಓರ್ವನ ಬಂಧನ | ಜನತಾ ನ್ಯೂಸ್
ಕಾರವಾರ : ಮೀನು ಸಾಗಣೆ ಲಾರಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಚಾಲಕ ಹಾನಗಲ್ ನಿವಾಸಿ ಮಹಮ್ಮದ್ ಶಾಹೀದ್ನನ್ನು ಬಂಧಿಸಲಾಗಿದೆ. 3 ಟನ್ ಮಾಂಸದ ಸಹಿತ ಓರ್ವನನ್ನು ಬಂಧಿಸಿರುವ ಘಟನೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ಗೇಟ್ ಬಳಿ ಇಂದು ನಡೆದಿದೆ.
ಹಾನಗಲ್ನಿಂದ ಮಂಗಳೂರಿಗೆ ಮಾಂಸ ಸಾಗಿಸುತ್ತಿದ್ದ ಕಂಟೇನರ್ನ ಅನುಮಾನಗೊಂಡು ತಡೆದ ಪಿಎಸ್ಐ ಆನಂದಮೂರ್ತಿ ಹಾಗೂ ರವಿ ಗುಡ್ಡೆ, ವಾಹನ ತಪಾಸಣೆ ನಡೆಸಿದಾಗ ಗೋಮಾಂಸ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
RELATED TOPICS:
English summary :Karwar