ಮನೆಯಂಗಳದಲ್ಲಿ ಆಟವಾಡುವಾಗ ಕುಸಿದು ಬಿದ್ದ ಬಾಲಕಿ ಸಾವು! | ಜನತಾ ನ್ಯೂಸ್
ದಾವಣಗೆರೆ : ಆಟವಾಡುವಾಗ ಕುಸಿದು ಬಿದ್ದ ಮಗುವೊಂದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ನಿಹಾರಿಕಾ ಎಂಬ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಗೊಲ್ಲರಹಟ್ಟಿ ಗ್ರಾಮದ ನಿವಾಸಿಯಾದ ಶಶಿ ಎಂಬುವರ ಪುತ್ರಿ ನಿಹಾರಿಕಾ, ಎಂದಿನಂತೆ ಇಂದು ಕೂಡ ಮನೆಯಂಗಳದಲ್ಲಿ ಆಟವಾಡುತಿದ್ದಳು. ಆದರೆ, ಇದ್ದಕ್ಕಿದ್ದಂತೆ ಕುಸಿದು ಬಿದ್ದಳು.
ಪೋಷಕರು ಗಾಬರಿಗೊಂಡು ಜಗಳೂರು ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಬಾಲಕಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.
English summary :Davanagere