ಒಂದೇ ಮನೆಯಲ್ಲಿ ನೇಣುಬಿಗಿದುಕೊಂಡು ಅಜ್ಜಿ, ಮಗಳು, ಮೊಮ್ಮಗಳು ಆತ್ಮಹತ್ಯೆ | ಜನತಾ ನ್ಯೂಸ್
ಚಿಕ್ಕಮಗಳೂರು : ಒಂದೇ ಕುಟುಂಬದ ಮೂವರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿ ತಾಲೂಕಿನ ಮಕ್ಕಿಮನೆಯಲ್ಲಿ ನಡೆದಿದೆ.
ಶಾರದಮ್ಮ (70), ವೀಣಾ (40), ಶ್ರಾವ್ಯ (17) ಆತ್ಮಹತ್ಯೆಗೆ ಶರಣಾದ ಅಜ್ಜಿ, ಮಗಳು, ಮೊಮ್ಮಗಳು ಎಂದು ಗುರುತಿಸಲಾಗಿದೆ.
ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆ ಅಂಗನವಾಡಿ ಸಹಾಯಕಿ ಪೂರ್ಣಿಮ ವೀಣಾಗೆ ಕರೆ ಮಾಡಿದ್ದಾರೆ. ಅವರು ಫೋನ್ ಪಿಕ್ ಮಾಡಿಲ್ಲ. ಆಗ ಪೂರ್ಣಿಮ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಅವರ ಮನೆ ಬಳಿ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಯಾರೂ ತೆಗೆಯದ ಹಿನ್ನೆಲೆ ಸ್ಥಳೀಯರು ಮನೆಯ ಹೆಂಚು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.