ನದಿ ನೀರಿಗೆ ಬಿದ್ದ ಮಗ, ರಕ್ಷಿಸಲು ಹೋದ ತಾಯಿ, ಮಗ ಮೃತ್ಯು! | ಜನತಾ ನ್ಯೂಸ್
ಕುಂದಾಪುರ : ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ನದಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗಂಗೊಳ್ಳಿ ಸಮೀಪದ ಚುಂಗಿಗುಡ್ಡೆ ಎಂಬಲ್ಲಿ ಬೆಳಗ್ಗೆ ನಡೆದಿದೆ.
ಮೃತರನ್ನು ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೋಝಿ ರಿಯಾ ಹಾಗೂ ಮಗ ಶಾನ್(11) ಎಂದು ಗುರುತಿಸಲಾಗಿದೆ.
ಚುಂಗಿಗುಡ್ಡೆ ನದಿ ಪಕ್ಕದಲ್ಲಿ ಬದಿ ವಾಕಿಂಗ್ಗೆ ತೆರಳಿದ್ದರು. ಈ ವೇಳೆ ಇವರ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದರು. ಮಗನನ್ನು ರಕ್ಷಣೆ ಮಾಡಲು ತಾಯಿ ಕೂಡ ನೀರಿಗೆ ಹಾರಿದರೆನ್ನಲಾಗಿದೆ. ಇದರಿಂದ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಪ್ರಕರಣ ನಡೆದ ಸ್ಥಳದಲ್ಲೇ ಪುತ್ರ ಶಾನ್ ಮೃತದೇಹ ಸಿಕ್ಕಿದ್ದರೂ, ತಾಯಿಯ ಶವಕ್ಕಾಗಿ ದೋಣಿ ಬಳಸಿ ಜಾಲಾಡಿದ್ದು, ಮರವಂತೆ ಬಳಿ ಮೃತದೇಹ ಪತ್ತೆಯಾಗಿದೆ.
ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.