Wed,Apr24,2024
ಕನ್ನಡ / English

ಅವಿವಾಹಿತ ಯುವತಿಯ ಅವಧಿಪೂರ್ವ ಪ್ರಸವ, ಡಿಎನ್ ಎ ಪರೀಕ್ಷೆಗೆ ಮುಂದಾದ ಪೊಲೀಸರು! | ಜನತಾ ನ್ಯೂಸ್

14 Sep 2021
2277

ಶಿವಮೊಗ್ಗ : ಅವಿವಾಹಿತ ಯುವತಿಯೋರ್ವಳು ಅವಧಿಪೂರ್ವ ಪ್ರಸವದ ವೇಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿರುವ ಕರುಣಾಜಕನ ಘಟನೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಮೃತ ಯುವತಿ. ಈಕೆ ಆಯನೂರಿನಲ್ಲಿ ಓದುವಾಗ ಆಯನೂರು ಸಮೀಪದ ಗ್ರಾಮದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕಡುಬಡತನ ಇದ್ದಿದ್ದರಿಂದಾಗಿ ಉದ್ಯೋಗ ಅರಸಿ ಮೈಸೂರಿಗೆ ತೆರಳಿದ್ದಳು.

ಅಲ್ಲಿ ಅಶ್ವಿನಿಗೆ ಬಸವರಾಜ್ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಕಾಲಕ್ರಮೇಣ ಅಶ್ವಿನಿಗೆ ಪ್ರೇಮಾಂಕುರವಾಗಿತ್ತು. ಇದೇ ವೇಳೆಗೆ ಕರೊನಾ ಲಾಕ್​ಡೌನ್ ಆಗಿದ್ದರಿಂದಾಗಿ ಅಶ್ವಿನಿ ಸ್ವಗ್ರಾಮಕ್ಕೆ ಬಂದಿದ್ದಳು. ಕುಂಸಿಗೆ ಬರುವಾಗ ತನ್ನೊಂದಿಗೆ ಬಸವರಾಜನನ್ನೂ ಕರೆದುಕೊಂಡು ಬಂದಿದ್ದಳು.

ಬಸವರಾಜ್ ಬಗ್ಗೆ ಮನೆಯವರು ವಿಚಾರಿಸಿದಾಗ ಆತ ನನ್ನ ಸ್ನೇಹಿತ. ಲಾಕ್​ಡೌನ್ ಹಿನ್ನೆಲೆಯಲ್ಲಿ ನನ್ನೊಂದಿಗೆ ಬಂದಿದ್ದಾನೆ, ಕೆಲ ದಿನದಲ್ಲೇ ಮತ್ತೆ ಮೈಸೂರಿಗೆ ಹೋಗುತ್ತಾನೆ ಎಂದಿದ್ದಳು. ಆದರೆ ಮನೆಯವರ ವಿಚಾರಣೆ ಹೆಚ್ಚಾದಾಗ ಹದಿನೈದು ದಿನದಲ್ಲೇ ಪ್ರೇಯಸಿಯ ಮನೆಯಿಂದ ಯುವಕ ಬೆಂಗಳೂರಿಗೆ ತೆರಳಿದ್ದ.

ಬಸವರಾಜ್ ಮೈಸೂರಿಗೆ ತೆರಳಿದ ಕೆಲದಿನಗಳ ಬಳಿಕ ಅಶ್ವಿನಿಯ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಆಗ ಅಶ್ವಿನಿ ಆಸ್ಪತ್ರೆಗೆ ಹೋಗಿ ಬರಲಾರಂಭಿಸಿದ್ದಳು. ಇದೇ ವೇಳೆಗೆ ಅಶ್ವಿನಿ ಹೊಟ್ಟೆಯೂ ಊದಿಕೊಳ್ಳಲಾರಂಭಿಸಿತ್ತು. ಈ ಬಗ್ಗೆ ಪಾಲಕರು ವಿಚಾರಿಸಿದಾಗ ಗ್ಯಾಸ್ ಸ್ಟಿಕ್ ನಿಂದ ಹೊಟ್ಟೆ ಊದಿಕೊಂಡಿದೆ ಎಂದು ಪಾಲಕರಿಗೆ ಸುಳ್ಳು ಹೇಳಿದ್ದ ಯುವತಿ ವಿಚಾರ ಮುಚ್ಚಿಟ್ಟುಕೊಂಡಿದ್ದಳು.

ಸೆ.12ರಂದು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಶ್ವಿನಿಯನ್ನು ಪಾಲಕರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ತಪಾಸಣೆ ಮಾಡಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ.

ಇದೇ ವೇಳೆಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವಧಿಪೂರ್ವವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿ ಪೂರ್ವವಾಗಿ ಮಗು ಜನಿಸಿದ್ದರಿಂದಾಗಿ ಮಗು ಬದುಕುಳಿದಿಲ್ಲ. ಮಗು ಮೃತಪಟ್ಟ ಎರಡು ಗಂಟೆ ಒಳಗಾಗಿ ಯುವತಿ ಕೂಡಾ ಮೃತಪಟ್ಟಿದ್ದಾಳೆ.

ತಾಯಿ ಹಾಗೂ ಹಸುಗೂಸು ಇಬ್ಬರೂ ಮೃತಪಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ಪ್ರಕರಣ ಸಂಬಂಧ ಕಾನೂನು ತೊಡಕು ಉಂಟಾದಲ್ಲಿ ಡಿಎನ್​ಎ ಟೆಸ್ಟ್ ಮಾಡಿಸಿ ಮಗುವಿನ ತಂದೆ ಯಾರು? ಎಂದು ಪತ್ತೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರು ಇದೀಗ ಡಿಎನ್‌ಎ ಟೆಸ್ಟ್ ಮೂಲಕ ಮಗುವಿನ ತಂದೆ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.

RELATED TOPICS:
English summary :Shivamogga

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ನ್ಯೂಸ್ MORE NEWS...