ವಿಷಾಹಾರ ಸೇವಿಸಿ ತಾಯಿ-ಮಗ ದಾರುಣ ಸಾವು! | ಜನತಾ ನ್ಯೂಸ್
ಬೆಳಗಾವಿ : ವಿಷಾಹಾರ ಸೇವಿಸಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ.
ಪಾರ್ವತಿ ಮಳಗಲಿ (53), ಸೋಮನಿಂಗಪ್ಪ ಮಳಗಲಿ(28) ಸಾವಿಗೀಡಾಗಿದ್ದು, ಭಾನುವಾರ ತಡರಾತ್ರಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಾಯಿ ಮತ್ತು ಮಗ ಹೊಲದ ಕೆಲಸಕ್ಕೆಂದು ತೆರಳಿದ್ದರು. ಸಂಜೆ ವೇಳೆಗೆ ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಭಜ್ಜಿ ಸೇವಿಸಿದ ತಾಯಿ-ಮಗ ಕೆಲ ಹೊತ್ತಿನ ಬಳಿಕ ಅಸ್ವಸ್ಥರಾಗಿದ್ದಾರೆ.
ತಕ್ಷಣವೇ ತಾಯಿ, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದೆ.
English summary :Belagavi