ಲಸಿಕೆ ಪಡೆಯದ 120 ಜನರಲ್ಲಿ ಕೊರೊನಾ ಸೋಂಕು, ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲು! | ಜನತಾ ನ್ಯೂಸ್
ಬಳ್ಳಾರಿ : ಕೊರೊನಾ ಲಸಿಕೆ ಪಡೆಯದ ಸುಮಾರು 120 ಜನ ಸೋಂಕಿತರು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ಮಾಹಿತಿ ನೀಡಿದ್ದಾರೆ.
ಸದ್ಯ 10 ಜನ ಸೋಂಕಿತರಿಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ 8 ಜನರು ಆಕ್ಸಿಜನ್ ಮೇಲಿದ್ದು, ಉಳಿದ 2 ಜನರು ವೆಂಟಿಲೇಟರ್ನಲ್ಲಿದ್ದಾರೆ ಎಂದು ಡಾ. ಬಸಾರೆಡ್ಡಿ ಮಾಹಿತಿ ನೀಡಿದ್ಧಾರೆ. ವ್ಯಾಕ್ಸಿನೇಷನ್ ಮಾಡಿಸಿಕೊಳ್ಳದ ಇಬ್ಬರು ಕೊವಿಡ್ಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.
ಲಸಿಕೆ ಪಡೆದವರಲ್ಲಿ ಯಾರೂ ಸಹ ಐಸಿಯೂ ಹೋಗುವ ಪರಿಸ್ಥಿತಿ ಬಂದಿಲ್ಲ, ಸೋಂಕಿನ ತೀವ್ರತೆ ಹೆಚ್ಚು ಕಾಡುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರು ಜೀವದ ಜೊತೆ ಆಟವಾಡದೇ ಲಸಿಕೆ ಪಡೆಯಬೇಕು ಎಂದು ಡಾ. ಬಸಾರೆಡ್ಡಿ ಮನವಿ ಮಾಡಿದ್ದಾರೆ.