ಸಿಮೆಂಟಿನ ಕಂಬ ತಯಾರಿಕಾ ಫ್ಯಾಕ್ಟರಿಯಲ್ಲಿ ಯುವಕ ಸಾವು | ಜನತಾ ನ್ಯೂಸ್
ಹುಬ್ಬಳ್ಳಿ : ರೈಲ್ವೆ ಹಳಿಗೆ ಹೊಂದಿಸುವ ಸಿಮೆಂಟಿನ ಕಂಬ ತಯಾರಿಕಾ ಫ್ಯಾಕ್ಟರಿಯಲ್ಲಿ, ಕಾರ್ಮಿಕನೊಬ್ಬ ಕೆಲಸ ಮಾಡುವ ಸಮಯದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಸಂಜಯ (18) ಎಂದು ಗುರುತಿಸಲಾಗಿದೆ. ಕೆಲಸದ ಸಮಯದಲ್ಲಿ ಸಿಮೆಂಟ್ ಕಂಬ ಯುವಕನ ಮೈಮೇಲೆ ಬಿದ್ದಿದೆ. ಇದಕ್ಕೆ ಕಾರ್ಖಾನೆಯ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಕಾರ್ಮಿಕರಿಗೆ ಸೂಕ್ತವಾದ ರಕ್ಷಣೆ ಹಾಗೂ ತರಬೇತಿ ನೀಡದೆ ಆಡಳಿತ ಮಂಡಳಿ ಯುವಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Man died in cement factory: Hubli