ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್! | JANATA NEWS
ಮೈಸೂರು : ಗೂಗಲ್ ಮೀಟ್, ಫೇಸ್ ಬುಕ್ನಲ್ಲಿ ಯುವತಿಯರಿಗೆ ಗಾಳ ಹಾಕಿ, ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಹಣ ಕೀಳುತ್ತಿದ್ದ ಆರೋಪಿಯನ್ನ ಮೈಸೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಬಿ.ಜಿ.ಶಿವಪ್ರಕಾಶ್ ಬಂಧಿತ ಆರೋಪಿ. ಈತ ಯುವತಿಯರನ್ನು ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು ಹಣ ಪೀಕುತ್ತಿದ್ದ ಎಂದು ಆರೋಪಿಸಲಾಗಿದೆ.
ಮೈಸೂರು ಮೂಲದ ಯುವತಿಯೊಬ್ಬರ ಜೊತೆಗೂ ಶಿವಪ್ರಕಾಶ್ ಸ್ನೇಹ, ಪ್ರೀತಿ, ನಾಟಕವಾಡಿ, ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷದವರೆಗೆ ಹಣ ಪಡೆದಿದ್ದ ಎಂದು ಆರೋಪಿಸಲಾಗಿದೆ.
ಈ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿ ಶಿವಪ್ರಕಾಶ್ನನ್ನು ಬಂಧಿಸಿದ್ದಾರೆ. ಹಲವು ಯುವತಿಯರ ಜೊತೆ ಪ್ರೀತಿ, ಪ್ರೇಮದ ನಾಟಕವಾಡಿ, ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಳ್ಳುತಿದ್ದ.. ಈತ ಹಲವು ಯುವತಿಯರನ್ನು ದುರುಪಯೋಗ ಮಾಡಿಕೊಂಡು ಏಕಾಂತದಲ್ಲಿರುವ ವಿಡಿಯೋ ಮಾಡಿಕೊಂಡಿದ್ದಾನೆ ಎನ್ನಲಾಗಿದೆ, ಆ ನಂತರ ಬೆತ್ತಲೆ ಫೋಟೋ ಕಳುಹಿಸಿ, ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದನಂತೆ ಎಂದು ಆರೋಪಿಸಲಾಗಿದೆ.