ಚಾಕೊಲೇಟ್ ನುಂಗಿ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು | JANATA NEWS
ಉಡುಪಿ : ಬಾಲಕಿಯೊಬ್ಬಳು ಕವರ್ ಸಮೇತ ಚಾಕಲೇಟ್ ತಿಂದು ಉಸಿರುಗಟ್ಟಿ ಮೃತಪಟ್ಟಿರೋ ಘಟನೆ ಬೈಂದೂರು ತಾಲೂಕು ಬವಳಾಡಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಮನ್ವಿ (6) ಮೃತಪಟ್ಟ ಬಾಲಕಿ.
ಬವಳಾಡಿ ಮೂಲದ ಸಮನ್ವಿ(6) ಮೃತ ದುರ್ದೈವಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದು, ಶಾಲಾ ಬಸ್ಗೆ ಕಾಯುತ್ತಿದ್ದಾಗ ಕೈಯಲ್ಲಿದ್ದ ಚಾಕೊಲೇಟ್ ತಿನ್ನಲು ಹೋಗಿ ಕವರ್ ಸಮೇತ ನುಂಗಿಬಿಟ್ಟಿದ್ದಾಳೆ.
ಚಾಕೊಲೇಟ್ ಗಂಟಲಲ್ಲಿ ಸಿಲುಕು ಉಸಿರಾಟಕ್ಕೆ ಸಮಸ್ಯೆ ಉಂಟಾಗಿ ಶಾಲಾ ಬಸ್ ಹತ್ತಿಸುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ಬಾಲಕಿ ಬೀಳುತ್ತಿದ್ದಂತೆ ಬಾಯಿಂದ ಚಾಕಲೇಟ್ ಹೊರಗೆ ಬಿದ್ದಿದೆ. ನಂತರ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.