ಬಿರಿಯಾನಿ ತಿಂದು 25 ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥ: ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲು | JANATA NEWS

ಚಾಮರಾಜನಗರ : ತಂಗಳು ಬಿರಿಯಾನಿ ತಿಂದು 25 ಮಂದಿ ಅಸ್ವಸ್ಥಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಜುಲೈ 18 ರಂದು ಅರೇಪಾಳ್ಯ ಗ್ರಾಮದಲ್ಲಿ ಸಂತೋಷ್ ಎಂಬುವವರು ತಮ್ಮ ಮಗನ ಹುಟ್ಟುಹಬ್ಬಕ್ಕೆ ಚಿಕನ್ ಬಿರಿಯಾನಿ ಮಾಡಿಸಿ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು.
ಮಾರನೇ ದಿನ ಬೆಳಗ್ಗೆ ಕಬ್ಬು ಬೆಳೆ ಕಟಾಬಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ಅದೇ ಚಿಕನ್ ಬಿರಿಯಾನಿ ವಿತರಿಸಿದ್ದಾನೆ. ಅದನ್ನು ತಿಂದವರೆಲ್ಲರಿಗೂ ಸಂಜೆಯಾಗುತ್ತಿದಂತೆ ವಾಂತಿ-ಭೇದಿ ಶುರುವಾಗಿದೆ.
ಸದ್ಯ ಎಲ್ಲರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ವಿಚಾರಣೆಯನ್ನು ನಡೆಸಿದ್ದಾರೆ.
RELATED TOPICS:
English summary :25 laborers sick after eating biryani: Admitted to Kollegala government hospital