ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್‌ನಿಂದ ಕೆಳಗೆ ಆಯತಪ್ಪಿ ಬಿದ್ದು ಮಹಿಳೆ ಸಾವು | JANATA NEWS
ಬಳ್ಳಾರಿ : ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ವೇಣಿ ವೀರಾಪುರ ಕ್ರಾಸ್ ಬಳಿ ಗುರುವಾರ ಸಂಭವಿಸಿದೆ.
ಮಹಿಳೆ ಬಾಗಿಲು ಬಳಿ ನಿಂತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಅವಘಡ ಸಂಭವಿಸಿದೆ. ಬಳ್ಳಾರಿಯಿಂದ ಹೊಸಪೇಟೆ ಕಡೆ ತೆರಳುತ್ತಿದ್ದ KA 34, F 1228 ನಂಬರ್ನ ಚಲಿಸುತ್ತಿದ್ದ ಬಸ್ಸಿನಿಂದ ನಿಯಂತ್ರಣತಪ್ಪಿ ಕೆಳಗೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಬಗ್ಗೆ ಪೊಲೀಸರಿಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
RELATED TOPICS:
English summary :A woman died after falling down from a moving KSRTC bus