Fri,Aug19,2022
ಕನ್ನಡ / English

ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು! ಆಹಾ ಎಂತಹ ನಾಟಕವಯ್ಯಾ, ಕಾಂಗ್ರೆಸ್‌ಬೊಂಬೆಯಾಟ: ಬಿಜೆಪಿ ಲೇವಡಿ | JANATA NEWS

04 Aug 2022
470

ಬೆಂಗಳೂರು : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದ ಮೇದಿಕೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಪ್ಪುಗೆಯನ್ನು ಅಣತಿಯ ಅಪ್ಪುಗೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಸಿದ್ದರಾಮಯ್ಯ-ಡಿಕೆಶಿಯದ್ದು ತೋರಿಕೆಯ ನಾಟಕ ಒಗ್ಗಟ್ಟು, ಅಣತಿಯ ಅಪ್ಪುಗೆಯಷ್ಟೆ, ಇದು ಎಷ್ಟು ದಿನ ನೋಡಬೇಕಿದೆ ಎಂದು ಬಿಜೆಪಿ ನಾಯಕರು ಅಣಕಿಸುತ್ತಿದ್ದಾರೆ. ಇದಕ್ಕೆ ಕಾರಣ ಕಾರ್ಯಕ್ರಮ ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ಅವರು ಭಾಷಣ ಮಾಡಿ ಸಿದ್ದರಾಮಯ್ಯನವರಿಗೆ ಶಾಲು ಹೊದೆಸಿ, ಇಂದಿರಾ ಗಾಂಧಿಯವರ ಪುಸ್ತಕ ಕೊಟ್ಟ ನಂತರ ಕೈಯೆತ್ತಿ ಪ್ರೇಕ್ಷಕರೆದುರು ಕೈಬೀಸಿದರು. ಸಿದ್ದರಾಮಯ್ಯನವರು ಕೂಡ ನಗುತ್ತಾ ಕೈಬೀಸಿದರು. ಆದರೆ ಅಷ್ಟಕ್ಕೇ ಮುಗಿಯಲಿಲ್ಲ.

ಪಕ್ಕದಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಕೈ ಸನ್ನೆ ಮಾಡಿ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಆಗ ಡಿ ಕೆ ಶಿವಕುಮಾರ್ ಅವರಿಗೆ ಇಚ್ಛೆಯಿತ್ತೋ, ಇಲ್ಲವೋ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಂಡರು. ಇದನ್ನೇ ಹಿಡಿದುಕೊಂಡು ಬಿಜೆಪಿ ಟ್ವೀಟ್ ಮಾಡಿ ಅಣಕಿಸಿದೆ.

janata

ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ, ಇದು ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು ! ಎಂತಹ ನಾಟಕವಯ್ಯಾ! ಎಂದು ವ್ಯಂಗ್ಯವಾಡಿದೆ. ಬುಧವಾರ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ರೇಶ್ಮೆ ಶಾಲು ಹೊದಿಸಿ ಇಂದಿರಾ ಗಾಂಧಿ ಅವರ ಭಾವಾಚಿತ್ರ ನೀಡಿದ್ದರು.

RELATED TOPICS:
English summary :The embrace of Anati, the seeming solidarity! What a drama, Congress puppetry: BJP karnataka

 ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ

ನ್ಯೂಸ್ MORE NEWS...