Fri,Aug19,2022
ಕನ್ನಡ / English

ಮಂಡ್ಯದಲ್ಲಿ ರುಂಡವಿಲ್ಲದ ಮೃತದೇಹ ಪ್ರಕರಣ ಕೇಸ್​ನ್ನು ಭೇದಿಸಿದ ಪೊಲೀಸರು! | JANATA NEWS

05 Aug 2022
411

ಮಂಡ್ಯ : ಎರಡು ತಿಂಗಳ ಹಿಂದೆ ನಾಲೆಯಲ್ಲಿ ತೇಲಿಬಂದ ರುಂಡವಿಲ್ಲದ 2 ಮಹಿಳೆಯರ ಮೃತದೇಹ ಪ್ರಕರಣ ಮಂಡ್ಯ ಜನರನ್ನು ಬೆಚ್ಚಿಬೀಳಿಸಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿಯ ಕೋಡಿಹಳ್ಳಿ ಕಾಲನಿ ನಿವಾಸಿ ಹಾಗೂ ಪಾಂಡವಪುರ ತಾಲೂಕಿನ ಹರವು ಗ್ರಾಮದ ಮಹಿಳೆಯನ್ನು ಬಂಧಿಸಲಾಗಿದೆ. ಇವರಿಬ್ಬರು ಮೂರು ಕೊಲೆಗಳನ್ನು ಮಾಡಿದ್ದು, ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು ಎಂದು ದಕ್ಷಿಣ ವಲಯ ಪೊಲೀಸ್‌ ಮಹಾನಿರೀಕ್ಷಕ ಪ್ರವೀಣ್ ಮಧುಕ‌ ಪವಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಈ 2 ಕೊಲೆಯ ಆರೋಪಿ. ಈತನಿಗೆ ಮದುವೆಯಾಗಿದ್ದರೂ ಪತ್ನಿ ಸಂಬಂಧಿಯ ಜೊತೆ ಲವ್ವಲ್ಲಿ ಬಿದ್ದಿದ್ದ. ಆದರೆ ಆಕೆಗೆ ವೇಶ್ಯಾವಟಿಕೆ ಲಿಂಕ್ ಇತ್ತು. ಇದನ್ನು ಸಿದ್ದಲಿಂಗಪ್ಪ ಸಹಿಸಲಾರನಾಗಿದ್ದ. ಅದಕ್ಕಾಗಿ ಪ್ರೇಯಸಿಯ ಲಿಂಕ್‌ನಲ್ಲಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆಗೈಯ್ಯುತ್ತಿದ್ದ.

ಜೂ.7ರಂದು ಇಬ್ಬರು ಮಹಿಳೆಯರ ಕೊಲೆಗೈದು ರುಂಡ-ಮುಂಡ ಬೇರೆ ಮಾಡಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ಮೃತದೇಹ ಎಸೆದಿದ್ದ. ಎರಡೂ ಶವಗಳಲ್ಲಿ ಸೊಂಟದಿಂದ ಮೇಲ್ಬಾಗದ ದೇಹವೇ ಇರಲಿಲ್ಲ. ಇದರಿಂದಾಗಿ ಗುರುತು ಪತ್ತೆಯಾಗದ ಹಿನ್ನೆಲೆ ಯಲ್ಲಿ ಈ ಪ್ರಕರಣ ಗಳು ಪೊಲೀಸರಿಗೆ ಸವಾಲಾಗಿದ್ದವು.

ಜು.25ರಂದು ಚಾಮರಾಜನಗರದಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇದ್ದವು. ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು. ವಿಚಾರಣೆಯಲ್ಲಿ ಎರಡರ ಜೊತೆ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್​​ಗಳನ್ನು ಪಾಪಿಗಳು ಬಾಯ್ಬಿಟ್ಟಿದ್ದಾರೆ. ಮಂಡ್ಯದ ನಾಲೆಯಲ್ಲಿ ಮಾತ್ರವಲ್ಲದೇ ಅದಕ್ಕೂ ಮೊದಲು ಬೆಂಗಳೂರಿನಲ್ಲೂ ಒಂದು ಕೊಲೆ ಮಾಡಿರೋದು ಗೊತ್ತಾಗಿದೆ.

9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿ ಕಲೆ ಹಾಕಲು 2 ತಾಂತ್ರಿಕ ಪರಿಣತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ, ಮಹಿಳೆಯರ ದೇಹವನ್ನು ತುಂಡರಿಸಿ ನಾಲೆಯಲ್ಲಿ ಎಸೆದು ಹೋಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

RELATED TOPICS:
English summary :The police cracked the case of a dead body in Mandya!

 ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ

ನ್ಯೂಸ್ MORE NEWS...