ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಏನ್ನೋದು ಭಂಡತನ | JANATA NEWS

ಗದಗ : ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಏನನ್ನು ಬೇಕಾದರೂ ತಿನ್ನಬಹುದು , ಪ್ರತಿಯೊಬ್ಬರಿಗೂ ತಿನ್ನುವ ಸ್ವಾತಂತ್ರ್ಯ ಇದೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೀನಿ ಎನ್ನುವುದು ಬಂಡತನ, ಇಂತಹ ಹೇಳಿಕೆಯನ್ನ ಯಾರೂ ಒಪ್ಪುವುದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ದಗದ ಲಕ್ಷ್ಮೇಶ್ವರದಲ್ಲಿ ಮಾತನಾಡಿರುವ ಅವರು, ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಸರಿಯಲ್ಲ, ಈ ರಾಜ್ಯದಲ್ಲಿ ಸಂಸ್ಕೃತಿ ಪರಂಪರೆ ಇದೆ. ಧಾರ್ಮಿಕ ಶ್ರದ್ಧೆ ಇದೆ. ದೈವವನ್ನ ನಂಬಿ ಜೀವನ ನಡೆಸುವ ಅಪಾರ ಜನರಿದ್ದಾರೆ. ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿ ಇರುವವರು ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ.
ರಾಜಕಾರಣಿಗಳ ಹೇಳಿಕೆಗಳು ಜನರಿಗೆ ಮಾದರಿಯಾಗಬೇಕೆ ಹೊರೆತು, ಇತರರಿಗೆ ಘಾಸಿಯನ್ನುಂಟುಬಾರದು. ಮಾಂಸ ತಿಂದು ದೇವಾಸ್ಥಾನಕ್ಕೆ ಹೋಗುತ್ತೇನೆ ಎಂಬ ಹೇಳಿಕೆಯನ್ನ ನಾನಲ್ಲ, ಇಡೀ ರಾಜ್ಯದ ಜನರು ಖಂಡಿಸುತ್ತಿದ್ದಾರೆ ಎಂದರು
ಬಿಜೆಪಿಯ ಹಿರಿಯ ನಾಯಕರು, ಪ್ರಧಾನ ಮಂತ್ರಿಗಳು ಯಡಿಯೂರಪ್ಪರಿಗೆ ಉನ್ನತ ಸ್ಥಾನ ಕೊಟ್ಟಿದ್ದು, ಇದು ಕಾಂಗ್ರೆಸ್‌ಗೆ ಆಘಾತವನ್ನುಂಟು ಮಾಡಿದೆ. ಏಕೆಂದರೆ ಅವರ ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಯಾಗಬಹುದು ಎನ್ನುವುದು ಅವರಲ್ಲಿರುವ ಆತಂಕವಾಗಿದೆ. ಅದಕ್ಕಾಗಿ ದೇವಾಸ್ಥಾನಗಳಿಗೆ, ಮಠಗಳಿಗೆ ,ಭೇಟಿ ಕೊಡುತ್ತಿದ್ದಾರೆ ಎಂದರು