ತುಮಕೂರಿನಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ 9 ಜನ ಸಾವು, 14 ಮಂದಿ ಗಂಭೀರ | JANATA NEWS
ತುಮಕೂರು : ಲಾರಿ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ನಡೆದಿದೆ.
ಸ್ಥಳದಲ್ಲಿಯೇ 9 ಜನರು ಸಾವನ್ನಪ್ಪಿದ್ದರೆ, 14 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಶಿರವಾರ ತಾಲೂಕಿನ ಕುರಕುಂದಾ ಗ್ರಾಮದ ಸುಜಾತಾ(25) ಮತ್ತು ವಿನೋದ(3), ವಡವಟ್ಟಿ ಗ್ರಾಮದ ಕ್ರೂಸರ್ ಚಾಲಕ ಕೃಷ್ಣಪ್ಪ(25), ಲಕ್ಷ್ಮೀ ಅಲಿಯಾಸ್ ಮೀನಾಕ್ಷಿ(28), ಕಸನದೊಡ್ಡಿ ಗ್ರಾಮದ ಬಸಮ್ಮ(50), ಪ್ರಭು ಸೇರಿ 10 ಮಂದಿ ಮೃತರು.
ಹಿಂಬದಿಯಿಂದ ಬಂದ ಲಾರಿಯೊಂದು ಕ್ರೂಸರ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಲಾರಿ ಗುದ್ದಿದ ರಭಸಕ್ಕೆ ಕ್ಯೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು. ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಕೂಲಿ ಕೆಲಸ ಅರಸಿ ಕ್ರೂಸರ್ ವಾಹನದಲ್ಲಿ ಗುಳೆ ಹೊರಟ್ಟಿದ್ದರು.