ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ, ಸ್ನೇಹಿತರಿಬ್ಬರ ದುರ್ಮರಣ! | JANATA NEWS
ಚಿಕ್ಕೋಡಿ : ಮಹಾನವಮಿ ನಿಮಿತ್ತ ಮನೆದೇವರ ದರ್ಶನ ಪಡೆದು ಮರಳಿ ಬರುವಾಗ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ನೇಹಿತರು ಮೃತ ಪಟ್ಟಿರುವ ದುರ್ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಕ್ಷಿ-ಶಿರಗಾಂವ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ (22) ಹಾಗೂ ಸಿದ್ದಾರೂಢ ವೀರಭದ್ರ ಕರೋಶಿ ಮೃತಪಟ್ಟವರು. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :A bike collided with a standing tractor, two friends died!