Tue,Aug04,2026
ಕನ್ನಡ / English

ಸಿದ್ದರಾಮಯ್ಯ ಯಾವ ಪಕ್ಷದಲ್ಲೂ ನೆಲೆಯಿಲ್ಲದ ಪರದೇಶಿ ಗಿರಾಕಿ | JANATA NEWS

04 Nov 2022

ಕೊಪ್ಪಳ : ಶ್ರೀರಾಮುಲು ಏನು ಆರೆಸ್ಸೆಸ್ ಗಿರಾಕಿನಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿರುವ ಶ್ರೀರಾಮುಲು ಅವರು, ಸಿದ್ದರಾಮಯ್ಯ ಯಾವ ಪಕ್ಷದಲ್ಲೂ ನೆಲೆಯಿಲ್ಲದ ಪರದೇಶಿ ಗಿರಾಕಿ ಎಂದು ಗುಡುಗಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬದಾಮಿಗೆ ಬಂದಿದ್ದೀರಿ. ಈಗ ಬದಾಮಿಯಲ್ಲೂ ನೆಲೆ ಇಲ್ಲದ ನೀನು ಕ್ಷೇತ್ರ ಹುಡುಕುತ್ತಿದ್ದೀಯಾ. ಒಬ್ಬ ಸಿಎಂ ಆಗಿದ್ದ ವ್ಯಕ್ತಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಹೀನಾಯವಾಗಿ ಸೋಲಿಸಿದರು. ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ. ಕ್ಷೇತ್ರ ಹುಡುಕಿಕೊಂಡು ಹೋಗುತ್ತಿದ್ದಾರೆ. ನಿಮ್ಮ ಕ್ಷೇತ್ರ ಯಾವುದು ಎಂದು ಮೊದಲು ನೀನು ಹೇಳು, ಆ ಮೇಲೆ ನನ್ನ ಬಗ್ಗೆ ಮಾತನಾಡು ಎಂದು ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯ ಅವರಿಗೆ ಯಾವ ಪಕ್ಷದಲ್ಲಿಯೂ ನೆಲೆಯಿಲ್ಲ. ಹಾಗಾಗಿ ಅವರೊಬ್ಬ ಪರದೇಶಿ ಗಿರಾಕಿಯಾಗಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಬೇರೆ ಪಾರ್ಟಿ ಗಿರಾಕಿಯಾಗಿದ್ದಾರೆ. ಅವರೇನು ಕಾಂಗ್ರೆಸ್ ಪಾರ್ಟಿ ಗಿರಾಕಿಯೇ? ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ವಲಸೆ ಬಂದಿದ್ದಾರೆ‌. ಅವರಿಗೆ ನನ್ನ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.

ಗುರುವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವ ಅವರು, ಶ್ರೀರಾಮುಲು ತನ್ನದೇ ಹೊಸ ಪಕ್ಷ ಕಟ್ಟಿಕೊಂಡಿದ್ದ. ಇವರಿಗೆ ಪಕ್ಷ, ಸಿದ್ಧಾಂತ, ಆರ್‌ಎಸ್‌ಎಸ್ ಬಗ್ಗೆ ಯಾವ ನಿಯತ್ತು ಇದೆ? ಇವ ಆರ್‌ಎಸ್‌ಎಸ್‌ ಗಿರಾಕಿನಾ? ಕಾಂಗ್ರೆಸ್‌ನಿಂದ ಮೊದಲು ಮುನಿಸಿಪಲ್‌ ಸದಸ್ಯ ಆದವ. ನಡುವೆ ಬಂದು ಬಿಜೆಪಿ ಸೇರಿದ್ದು ಎಂದು ತರಾಟೆಗೆ ತೆಗೆದುಕೊಂಡಿದ್ದರು.

RELATED TOPICS:
English summary :Siddaramaiah is a foreigner who has no base in any party

ಕರ್ನಾಟಕ ರಾಜ್ಯ ಸಂಪುಟಕ್ಕೆ 20 ಸಚಿವರ ಸೇರ್ಪಡೆಗೆ ಅನುಮೋದನೆ

 ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು

ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ

ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ

ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ

ಪಿಒಜೆಕೆಯಲ್ಲಿ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಖಂಡಿಸಿ, ಪಾಕಿಸ್ತಾನ ಬೆಂಬಲಿತ ಚುನಾವಣೆಗಳನ್ನು ತೋರಿಕೆಯ ವ್ಯಾಯಾಮ ಎಂದ ಭಾರತ

6 ಪ್ರಶ್ನೆ ಪತ್ರಿಕೆಗಳ ಸೋರಿಕೆ : ಪಂಜಾಬ್ ಸಚಿವರ ರಾಜೀನಾಮೆಗೆ ಎನ್‌ಡಿಎ ಸಂಸದರ ಆಗ್ರಹ; ಸಂಸತ್ತಿನಲ್ಲಿ ರಾಜಕೀಯ ಜಟಾಪಟಿ

ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಅಧಿಕಾರದ ಕಾರ್ಯಪಡೆ ಘೋಷಿಸಿದ ಪ್ರಧಾನಿ ಮೋದಿ : ನೇತೃತ್ವ ವಹಿಸಲು ನಂದನ್ ನಿಲೇಕಣಿ ಆಯ್ಕೆ

ಅಣೆಕಟ್ಟುಗಳ ಹೂಳೆತ್ತುವಿಕೆ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಕೇಂದ್ರದ ಬೆಂಬಲದ ಭರವಸೆ

ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆ ಮುಂದೂಡಿಕೆ

 ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕುನಾಲ್ ಕಮ್ರಾ, ವಾಂಗ್‌ಚುಕ್ ಮತ್ತು ಡಿಪ್ಕೆ ವಿರುದ್ಧ ದೂರು ದಾಖಲು

ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎನ್ನುವುದು ಹೊಣೆಗೇಡಿತನ - ಶಾಸಕ ಯತ್ನಾಳ್

ನ್ಯೂಸ್ MORE NEWS...