ತೆಲಂಗಾಣ : ಕಾಡಿನ ಮರ ಕಡೆಯುವವರ ದಾಳಿಗೆ ಅರಣ್ಯ ವಲಯ ಅಧಿಕಾರಿ ಸಾವು | JANATA NEWS

ಹೈದರಾಬಾದ್ : ತೆಲಂಗಾಣದ ಖಮ್ಮಂ ಜಿಲ್ಲೆಯ ಚಂದ್ರುಗೊಂಡ ಮಂಡಲದ ಬೆಂಡಲಪಾಡು ಗ್ರಾಮದಲ್ಲಿ ಜನರ ಗುಂಪಿನಿಂದ ದಾಳಿಗೊಳಗಾದ ಅರಣ್ಯ ವಲಯ ಅಧಿಕಾರಿ(ಎಫ್‌ಆರ್‌ಒ) ಸಾವನ್ನಪ್ಪಿದ್ದಾರೆ. ನವೆಂಬರ್ 22ರಂದು ಮಂಗಳವಾರ ಈ ಘಟನೆ ನಡೆದಿದೆ.
ದಾಳಿಯ ನಂತರ ಎಫ್‌ಆರ್‌ಒ ಖಮ್ಮಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಮೃತ ಅಧಿಕಾರಿ ಶ್ರೀನಿವಾಸ ರಾವ್ ಮೇಲೆ ಗುತ್ತಿ ಕೋಯಸ್(ವಲಸಿಗ ಬುಡಕಟ್ಟು ಜನಾಂಗದವರು) ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಗೊಳಗಾದ ಅಧಿಕಾರಿ ಅವರು ಚಂದ್ರುಗೊಂಡ ಮಂಡಲದ ಬೆಂದಲಪಾಡು ಗ್ರಾಮದಲ್ಲಿ ದಾಳಿಕೋರರು ಮರಗಳನ್ನು ಕಡಿಯುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದರು.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತ ಎಫ್‌ಆರ್‌ಒ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.