Tue,Nov04,2025
ಕನ್ನಡ / English

ಗುಂಡಿನ ದಾಳಿ: ಯುವಕ ಸಾವು, ಮತ್ತಿಬ್ಬರು ಗಂಭೀರ | JANATA NEWS

10 Jan 2023

ಹಾಸನ : ಮೀನು ಹಿಡಿಯಲು ಹೋಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಕರ್ತ ಸೇರಿದಂತೆ ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದಲ್ಲಿ ನಡೆದಿದೆ.

ನವೀನ್(39) ಮೃತ ಯುವಕ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ತಂಬಲಗೇರಿ ಗ್ರಾಮದ ನವೀನ್ (39) ಮೃತಪಟ್ಟ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ.

ಸೋಮವಾರ ಸಂಜೆ ಮೃತ ನವೀನ್‌ ಹಾಗೂ ಆತನ ಸ್ನೇಹಿತರಾದ ದಯಾನಂದ, ಪದ್ಮನಾಭ್, ರಾಜಾಚಾರಿ ತಂಬಲಗೇರಿ ಗ್ರಾಮದಲ್ಲಿ ಮೀನು ಹಿಡಿಯಲು ತೆರಳಿದ್ದರು.

ಈ ವೇಳೆ ಅಪರಿಚಿತರ ತಂಡ ಗುಂಡಿನ ದಾಳಿ ನಡೆಸಿದ್ದು, ನವೀನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ದಯಾನಂದ ಹಾಗೂ ಪದ್ಮನಾಭ ಅವರು ಗಂಭೀರವಾಗಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED TOPICS:
English summary :Shooting: Youth killed, two others critical

ರಕ್ಷಣಾ ಕ್ಷೇತ್ರದ ದೊಡ್ಡ ಮೈಲಿಗಲ್ಲು : ದೈತ್ಯ ಸಂವಹನ ಉಪಗ್ರಹ ಹೊತ್ತೊಯ್ದ ಇಸ್ರೋದ ಎಲ್ವಿಎಂ3-ಎಂ5

ರಿಲಯನ್ಸ್ ಅಂಬಾನಿ ಗ್ರೂಪ್‌ ಸಂಬಂಧಿಸಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ರಕ್ಷಣಾ ಪಡೆಗಳ ತ್ರಿಶೂಲ್ 2025 ವ್ಯಾಯಾಮಕ್ಕಾಗಿ ಕರಾಚಿ ಹತ್ತಿರದ ವರೆಗೂ ನೋಟಾಮ್ ಬಿಡುಗಡೆ ಮಾಡಿದ ಭಾರತ

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಅಧಿಕಾರಿ ಅಮಾನತು ಆದೇಶವನ್ನು ನ್ಯಾಯಾಲಯ ತಡೆಹಿಡಿದೆ - ಸಂಸದ ಸೂರ್ಯ

ಬೆಂಗಳೂರಿನಲ್ಲಿ ಚಾಲಕರಹಿತ ಕಾರಿನ ಅನಾವರಣ : ಆರ್.ವಿ.ಕಾಲೇಜು ಕ್ಯಾಂಪಸ್‌ ನಲ್ಲಿ ಚಲಿಸಿದ ಕಾರು

ಅಫ್ಘಾನಿಸ್ತಾನದೊಂದಿಗಿನ ಕದನ ವಿರಾಮ ಮಾತುಕತೆ ವಿಫಲವಾಗಲು ನವದೆಹಲಿಯೇ ಕಾರಣ - ಪಾಕಿಸ್ತಾನದ ಗಂಭೀರ ಆರೋಪ

ಸಿಎಂ ಕುರ್ಚಿ ಹಗ್ಗಜಗ್ಗಾಟ ಮಧ್ಯೆ ಡಿಸಿಎಂ ಡಿಕೆಶಿ ಭೇಟಿ ಮಾಡಿದ ಬಿಜೆಪಿ ಸಂಸದ ಸೂರ್ಯ

ಭಾರತದ ಸಚಿವರ ಬಲವಾದ ಸಂದೇಶ: ನಮ್ಮ ತಲೆಯ ಮೇಲೆ ಬಂದೂಕು ಹಿಡಿದು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲ್ಲ

ತಿಂಗಳೊಳಗೆ ಮತ್ತೊಂದು ಸ್ಲೀಪರ್ ಕೋಚ್ ಬಸ್ ಬೆಂಕಿ ದುರಂತ : ಬಾಗಿಲು ಜಾಮ್ ಕಾರಣ 25 ಸಾವು, ಹಲವರಿಗೆ ಗಾಯ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ

ನಗರದ ರಸ್ತೆ ದುರಸ್ತಿಗೆ ಕಿರಣ್ ಮಜುಂದಾರ್ ಶಾ ಅವರೇ ಮಾಡಲಿ, ತುಂಬಾ ಸಂತೋಷ - ಡಿಸಿಎಂ ಶಿವಕುಮಾರ್

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ

ನ್ಯೂಸ್ MORE NEWS...