Sun,Dec14,2025
ಕನ್ನಡ / English

ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಏನು ಹೇಳುತ್ತಾರೋ ಅದೇ ಫೈನಲ್ | JANATA NEWS

29 Jan 2023

ಹಾಸನ : ರೇವಣ್ಣ ಹೊಳೆನರಸೀಪುರದಲ್ಲಿ ಮಾತನಾಡಿ, ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.

ಯಾವಾಗ ಕಾರ್ಯಕ್ರಮ ವೇದಿಕೆಯೊಂದರಲ್ಲಿ ಭವಾನಿ ರೇವಣ್ಣ, ಸದ್ಯದಲ್ಲೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನನ್ನ ಹೆಸರನ್ನು ಘೋಷಿಸಿಲಿದ್ದಾರೆ ಎಂದಿದ್ದರು. ತಾಯಿ ಭವಾನಿ ರೇವಣ್ಣ ಟಿಕೆಟ್​ಗಾಗಿ ಪುತ್ರನೂ ಆಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಿಗಿಪಟ್ಟು ಹಿಡಿದಿದ್ದು, ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧವೇ ಹೇಳಿಕೆ ನೀಡಿದ್ದರು.

ರಾಯಚೂರಿನಲ್ಲಿ ಭಾವುಕ ಮಾತುಗಳನ್ನಾಡಿದ್ದ ಕುಮಾರಸ್ವಾಮಿ, ನಮ್ಮ ಕುಟುಂಬದ ಮಕ್ಕಳು ಮಾತಾಡಿದ್ದಾರೆ ಏನ್ಮಾಡೋದು? ಶಕುನಿಗಳು ನಮ್ಮ ಕುಟುಂಬದ ಮಕ್ಕಳಿಗೆ ಪ್ರಚೋದಿಸಿದ್ದಾರೆಂದು ಗರಂ ಆಗಿದ್ದರು. ಅಲ್ಲದೆ ಹಾಸನದ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ ಎಂದಿದ್ದರು.

ಈಗ ರೇವಣ್ಣ ಮಾತನಾಡಿ, ಹಾಸನದಲ್ಲಿ ಭವನಿ ರೇವಣ್ಣ ಟಿಕೆಟ್ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ. ನಾನು ಮತ್ತು ಕುಮಾರಸ್ವಾಮಿ ಹೊಡೆದಾಡಿಕೊಂಡಿದ್ದೇವೆ ಅಂತ ಅಂದುಕೊಂಡದರೆ ಅದು ಬ್ರಹ್ಮ ನಿರಸನ. ಕುಮಾರಸ್ವಾಮಿ ನಮ್ಮ ನಾಯಕ. ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಕೆಲವರು ಅಂದುಕೊಂಡಿದ್ದರು. ನನ್ನ ತಲೆ ಇರುವವರೆಗೆ ಯಾವುದೇ ಕಾರಣಕ್ಕೂ ನಾವು ಹೊಡೆದಾಡಲ್ಲ ಎಂದಿದ್ದಾರೆ.​ ಅಲ್ಲದೆ, ಕ್ಷೇತ್ರದ ಜೆಡಿಎಸ್​ ಟಿಕೆಟ್​ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆ​ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

ಎಲ್ಲಾ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. ಕುಟುಂಬ ರಾಜಕಾರಣ ಅಂದರೆ ನಾನು ಪ್ರಜ್ವಲ್, ಸೂರಜ್, ಎಲ್ಲರಲ್ಲಿಯೂ ಇವತ್ತೇ ರಾಜೀನಾಮೆ ಕೊಡಿಸುತ್ತೇನೆ. ರಾಮನಗರದಲ್ಲಿ ನಿಖಿಲ್ ಗೆಲ್ಲುತ್ತಾರೆ ಅಂದರೆ ಅದು ‌ಅವರ‌ ಶಕ್ತಿ ಎಂದು ಹೇಳಿದರು.

ಕುಮಾರಸ್ವಾಮಿ ಹಾಗೂ ನನ್ನ ಸಂಬಂಧ ಬೇರ್ಪಡಿಸಲು ಸಾಧ್ಯವಿಲ್ಲ, ನಮ್ಮಿಬ್ಬರನ್ನು ಬೇರ್ಪಡಿಸುತ್ತೇವೆ ಎಂಬುವುದು ಕೆಲವರ ಭ್ರಮೆ ಅಷ್ಟೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೇಟ್ ವಿಚಾರದ ಬಗ್ಗೆ ಎಲ್ಲರು ಕುಳಿತುಕೊಂಡು ಚರ್ಚೆ ಮಾಡಿ ಜನರ ವಿಶ್ವಾಸ ಹಾಗೂ ಸ್ಥಳೀಯ ಶಾಸಕ ಅಭಿಪ್ರಾಯ ಪಡೆಯುತ್ತಾರೆ. ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ ಎಂದರು.

ಕೆಲವರು ಭವಾನಿ ಅವರಿಗೆ ಟಿಕೆಟ್ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡುವುದು ಪಕ್ಷ. ‌ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಅಥವಾ ಇನ್ಯಾರೇ ಆಗಲಿ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಎಲ್ಲರೂ ಬದ್ದರಾಗಿ ಇರಬೇಕಾಗುತ್ತದೆ ಎಂದರು.

RELATED TOPICS:
English summary :The final is what Kumaraswamy says about the ticket

2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಎಸ್ಐಆರ್ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗ ಸಾಂವಿಧಾನಿಕ, ಶಾಸನಬದ್ಧ ಅಧಿಕಾರ ಹೊಂದಿದೆ - ಸರ್ವೋಚ್ಚ ನ್ಯಾಯಾಲಯ
ಎಸ್ಐಆರ್ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗ ಸಾಂವಿಧಾನಿಕ, ಶಾಸನಬದ್ಧ ಅಧಿಕಾರ ಹೊಂದಿದೆ - ಸರ್ವೋಚ್ಚ ನ್ಯಾಯಾಲಯ

ನ್ಯೂಸ್ MORE NEWS...