ಗಾಂಜಾ ಬೆಳೆದಿದ್ದ ಆರೋಪಿಗೆ 15 ವರ್ಷ ಕಠಿಣ ಜೈಲು ಶಿಕ್ಷೆ | JANATA NEWS
ಗದಗ : ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷ ವಿಧಿಸಿ ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಬೆಳಗಟ್ಟಿ ಗ್ರಾಮದ ಉಡಚಪ್ಪ ಪುರದ ಎಂಬಾತ 1 ಎಕರೆ 10 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ. 2013 ನವೆಂಬರ್ 09 ರಂದು ಶಿರಹಟ್ಟಿ ಪೊಲೀಸರು ದಾಳಿ ಮಾಡಿ, ಒಂದು ಲಕ್ಷ ರೂಪಾಯಿ ಮೌಲ್ಯದ 101 ಕೆಜಿ ತೂಕದ ಗಾಂಜಾವನ್ನ ವಶಕ್ಕೆ ಪಡೆದಿದ್ದರು.
2014 ಏಪ್ರಿಲ್ 30 ರಂದು ಪಿಎಸ್‌ಐ ಎಸ್.ಆರ್ ಕಟ್ಟಿಮನಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ರಾಜ್ವೇಶ್ವರ ಎಸ್.ಶೆಟ್ಟಿ ಅವರು ಪರಿಶೀಲಿಸಿ ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ.
English summary :15 years rigorous imprisonment for the accused who grew ganja