ದಾಖಲೆ ಇಲ್ಲದೆ ಗದಗ ನಗರಕ್ಕೆ ತರುತ್ತಿದ್ದ 4 ಕೆಜಿ ಬಂಗಾರ ಸೀಜ್! | JANATA NEWS

ಗದಗ : ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ ಚಿನ್ನಾಭರಣ ಸೀಜ್ ಮಾಡಿದ್ದು, ಮಾರ್ಚ್ 15 ರಂದು ದಾಖಲೆ ಇಲ್ಲದ ನಾಲ್ಕು ಕೆಜಿ ಸುಮಾರು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.
ಗದಗ ನಗರದ ಹೊರವಲಯದ ಟಾಂಗಾಕೂಟ್ ಚೆಕ್ ಪೋಸ್ಟ್ ನಲ್ಲಿ 4 ಕಿಲೋ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ ಚಿನ್ನಾಭರಣ ಸೀಜ್ ಮಾಡಿದ್ದು, ಮಾರ್ಚ್ 15 ರಂದು ದಾಖಲೆ ಇಲ್ಲದ ನಾಲ್ಕು ಕೆಜಿ ಸುಮಾರು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಾದ ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬುವರ ಸಾಗಾಣೆ ಮಾಡುತ್ತಿದ್ದ ಚಿನ್ನ ಸೀಜ್ ಮಾಡಿದ್ದು, ಡಿಸಿ ವೈಶ್ಯಾಲಿ, ಎಸ್ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಚಿನ್ನಾಭರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.