ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರೂಪದ ಕಪ್ಪು ಚಿರತೆ ಕೊನೆಗೂ ಸೆರೆ | JANATA NEWS

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರೂಪದ ಬ್ಲ್ಯಾಕ್ ಪ್ಯಾಂಥರ್ ಸೆರೆ ಹಿಡಿಯಲಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ವಂದೂರು ಗ್ರಾಮದಲ್ಲಿ ಜನರಿಗೆ ಸಾಕಷ್ಟು ಕಿರುಕುಳ ನೀಡಿ ಆತಂಕ ಸೃಷ್ಟಿಸಿದ್ದ ಕಪ್ಪು ಚಿರಿತೆಯನ್ನು ಹಿಡಿಯುವಲ್ಲಿಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಹೊನ್ನಾವರ ತಾಲೂಕಿನ ಸಾಲ್ಕೋಡ–ಅರೇಂಗಡಿ, ವಂದೂರು ಭಾಗಗಳಲ್ಲಿ ನಿರಂತರವಾಗಿ ಗುಡ್ಡಕ್ಕೆ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿದ್ದವು. ಕಡ್ಲೆ, ದುಗ್ಗೂರ, ವಂದೂರು ಗುಡ್ಡದ ಭಾಗದಲ್ಲಿಯೂ ಅನೇಕ ಹಸುಗಳು ಗುಡ್ಡಕ್ಕೆ ಬಿಟ್ಟಾಗ ಕಣ್ಮರೆ ಆಗುತ್ತಿರುವುದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಅರಣ್ಯ ಇಲಾಖೆ ಈ ಚಿರತೆಯನ್ನು ಹಿಡಿಯಲು ಈ ಭಾಗಗಳಲ್ಲಿ ಬೋನುಗಳನ್ನು ಇಟ್ಟು, ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದೆ