ವಾಹನದಲ್ಲಿ ಸಿಕ್ತು ದಾಖಲೆ ಇಲ್ಲದ 5 ಕೋಟಿ ರೂ. | JANATA NEWS
ಬಾಗಲಕೋಟೆ : ದಾಖಲೆಯಿಲ್ಲದೆ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ 5 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಮುಧೋಳ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಲೋಕಾಪುರ ಪೊಲೀಸರು ಜತೆಯಾಗಿ ಲೋಕಾಪುರ ಪಟ್ಟಣ ಬಳಿ ಕಾರ್ಯಾಚರಣೆ ನಡೆಸಿದ್ದಾರೆ.
ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್ಪೋಸ್ಟ್ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ವೇಳೆ ಈ ಅಪಾರ ಪ್ರಮಾಣದ ಹಣ ಸಿಕ್ಕಿದೆ.
ಬೊಲೆರೊ ವಾಹನದಲ್ಲಿ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಈ ಹಣ ಸಾಗಿಸಲಾಗುತ್ತಿದ್ದು, ಹಣ ಯೂನಿಯನ್ ಬ್ಯಾಂಕ್‌ಗೆ ಸೇರಿದ್ದು ಎಂಬ ಮಾಹಿತಿ ನೀಡಿದರೂ ಸಹ ಸಮರ್ಪಕ ದಾಖಲೆಯಿಲ್ಲದ ಹಿನ್ನೆಲೆ ಹಣವನ್ನು ಜಪ್ತಿಪಡಿಸಿಕೊಂಡು ಕಾರಿನಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ.
English summary :5 crore found in the vehicle without any documents.