ಕಲಬುರಗಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ | JANATA NEWS

ಕಲಬುರಗಿ : ಕಲಬುರಗಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ಹುಮನಾಬಾದ ರಸ್ತೆಯಲ್ಲಿರುವ ಕೆಎಂಎಫ್ ಡೈರಿ ಸರ್ಕಲ್ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸುಮಾರು 5 ಕಿಮೀಗಳಷ್ಟು ದೂರ ರೋಡ್ ಶೋ ನಡೆಸಿದ್ದಾರೆ.
ಪ್ರಧಾನಿ ಮೋದಿ ಸಿಂಧನೂರಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲೇ ಉರಿ ಬಿಸಿಲನ್ನೂ ಲೆಕ್ಕಿಸದೆ ಕಲಬುರಗಿಯ ರಸ್ತೆಗಳಲ್ಲಿ ಜಮಾಯಿಸಲಾರಂಭಿಸಿದ್ದರು. ಭಾರತ್ ಮಾತಾಕೀ ಜೈ, ಜೈ ಶ್ರೀರಾಮ್, ಜೈ ಜೈ ಮೋದಿ ಘೋಷಣೆಗಳು ಮೊಳಗಿದವು. ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಮೋದಿ. ಮೋದಿ. ಮೋದಿ. ಎಂದು ಘೋಷಣೆ ಕೂಗಿದರು.
ಪ್ರಧಾನಿ ಮೋದಿ ಹುಮನಾಬಾದ ರಸ್ತೆಯಲ್ಲಿರುವ ಕೆಎಂಎಫ್ ಡೈರಿ ಸರ್ಕಲ್ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸುಮಾರು 5 ಕಿಮೀಗಳಷ್ಟು ದೂರ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಭಾಗದಲ್ಲಿ ಕಿಕ್ಕಿರಿದು ಜನರು ಸೇರಿದ್ದರು.
ಮೋದಿ ರೋಡ್ ಶೋಗೆ ಪೊಲೀಸ್ ಹಾಗೂ ಸೇನಾ ಪಡೆಗಳಿಂದ ಸರ್ಪಗಾವಲು ಹಾಕಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.