Thu,Sep11,2025
ಕನ್ನಡ / English

ನಾನು ಗೌಡ್ತಿನೇ, ಇದನ್ನ ಯಾರಿಂದ ಕಿತ್ತುಕೊಳ್ಳೋಕೆ ಆಗಲ್ಲ: ರಮ್ಯಾ | JANATA NEWS

02 May 2023

ಮಂಡ್ಯ : ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಆಗಮಿಸಿದ್ದರು.

ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, "ನಾನು ಮೂಲತಃ ಮಂಡ್ಯದವಳೇ ಆಗಿದ್ದು, ನಾನು ಮಂಡ್ಯದ ಗೌಡ್ತಿಯಾಗಿದ್ದೇನೆ. ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ," ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕಿ ರಮ್ಯಾ ನಾನು ಕಷ್ಟದಲ್ಲಿದ್ದಾಗ ಮಂಡ್ಯ ಜನತೆ ನನ್ನ ಜತೆ ಇದ್ರು ಅವ್ರ ಮೇಲಿನ ಗೌರವ ಯಾವತ್ತೂ ಕಡಿಮೆ ಆಗಲ್ಲ. ಜನರ ನಡುವಿನ ಬಾಂಧವ್ಯಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಸಂದರ್ಭದಲ್ಲಿ ರಮ್ಯಾ ಮದುವೆ ಯಾವಾಗ ಮದುವೆ ಕುರಿತಾದ ಪ್ರಶ್ನೆಗೆ. ನಗುತ್ತಲೇ ಉತ್ತರಿಸಿದ ಅವರು, ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದಿದ್ದಾರೆ.

ನಾನು ಮಂಡ್ಯಕ್ಕೆ ಬರುತ್ತಾ ಇರುತ್ತೇನೆ. ಸೋಮವಾರವೂ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನನಗೆ ನೆಂಟರು ಇದ್ದಾರೆ. ಸಾಕಷ್ಟು ಬಾರಿ ನಾನು ಮಂಡ್ಯಕ್ಕೆ ಬಂದಿದ್ದೇನೆ. ಆದರೆ ಕ್ಯಾಮಾರಾ ಕಣ್ಣಿಗೆ ಎಲ್ಲೂ ಕಾಣಿಸಿಕೊಂಡಿಲ್ಲ," ಎಂದರು.

ಮಂಡ್ಯ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ಮಂಡ್ಯ ಜನರ ಜೊತೆ ನನ್ನ ಸಂಬಂಧ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ರಮ್ಯಾ ಹೇಳಿದರು.

ಅಂಬರೀಶ್ ಸಂತ್ಯಸಂಸ್ಕಾರಕ್ಕೆ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ. ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳುವ ಅಭ್ಯಾಸ ಇಲ್ಲ. ಬೇರೆಯವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ, ನಾನು ಹಾಗೇ ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.

RELATED TOPICS:
English summary :I am Gauthina, I cannot take this from anyone: Ramya

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು  ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
11
11
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್  ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...