Wed,May06,2026
ಕನ್ನಡ / English

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಕಾರ್ಕಳದ ಉಪನ್ಯಾಸಕರಿಬ್ಬರು ನೀರುಪಾಲು | JANATA NEWS

18 Jun 2023

ಶಿವಮೊಗ್ಗ : ತುಂಗಾನದಿಯಲ್ಲಿ ಈಜಲು ತೆರಳಿದ್ದ ಉಪನ್ಯಾಸಕರಿಬ್ಬರು ನೀರುಪಾಲಾಗಿರುವಂತ ಘಟನೆ ನಡೆದಿದೆ. ಈ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೋರ್ವನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಪ್ರಾಧ್ಯಾಪಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿ‌ ನಡೆದಿದೆ. ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್​​ (36) ಹಾಗೂ ಬಾಲಾಜಿ (36) ಎಂದು ಗುರುತಿಸಲಾಗಿದೆ.

ಉಪನ್ಯಾಸಕರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ತಂಗಿದ್ದರು. ಬಳಿಕ ಇಂದು ಬೆಳಗ್ಗೆ ತಿಂಡಿ ತಿಂದು ನದಿಯ ಬಳಿಗೆ ಈಜಲು ಹೋಗಿದ್ದಾರೆ.

ಈ ವೇಳೆ ಈಜಲು ನದಿಗಿಳಿದ ಪುನೀತ್ ಅವರು ನದಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇನ್ನು ಇವರನ್ನು ರಕ್ಷಿಸಲು ಹೋದ ಬಾಲಾಜಿ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೋರ್ವ ಉಪನ್ಯಾಸಕರ ಮೃತದೇಹ ಪತ್ತೆಗಾಗಿ ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.

RELATED TOPICS:
English summary :Two lecturers from Karkala who had gone for a swim in the Tunga river were watered down

ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ

ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ

ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.

ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ

ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ

ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ

ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ

ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.

ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ

ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್

ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು

ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ನ್ಯೂಸ್ MORE NEWS...