Wed,May06,2026
ಕನ್ನಡ / English

ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ. ಅಲ್ಲೇ ಬಿರುಕು, ಅಸಮಾಧಾನ ಸೃಷ್ಟಿ ಆಗುತ್ತಿದೆ! | JANATA NEWS

24 Jun 2023

ಹುಬ್ಬಳ್ಳಿ : ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಅದು ಯಾವಾಗ ಸ್ಫೋಟ ಆಗುತ್ತದೆ ಎಂಬುದು ಗೊತ್ತಿಲ್ಲ. ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ. ಅಲ್ಲೇ ಬಿರುಕು, ಅಸಮಾಧಾನ ಸೃಷ್ಟಿ ಆಗುತ್ತಿದೆ ಎಂದು ನೂತನ ವಿಧಾನ ಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ರಂಟಿಗಳು ಬಡ ಜನತೆಗೆ ಅನುಕೂಲಕರವಾಗಿದ್ದು ಅವುಗಳನ್ನು ಸಹಿಸಿಕೊಳ್ಳುವ ಕೆಲಸ ಬಿಜೆಪಿ ಅವರಿಂದ ಆಗುತ್ತಿಲ್ಲ ಎಂದರು.

ಭಾರತೀಯ ಆಹಾರ ನಿಗಮದ (ಎಫ್ಸಿಐ) ಮೂಲಕ ಕರ್ನಾಟಕ ಅಕ್ಕಿ ಖರೀದಿಗೆ ನಿರಾಕರಿಸಿರುವ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್, ಇದು ಅಕ್ಷಮ್ಯ ಅಪರಾಧ' ಎಂದು ಆರೋಪಿಸಿದರು. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಬಡವರ ಊಟದ ವಿಚಾರದಲ್ಲಿ ಯಾರೂ ಸಹ ಇಂತಹ ಕಾರ್ಯ ಮಾಡಬಾರದು ಎಂದರು.

ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ ಬಿಜೆಪಿಯವರ ಹೇಳಿಕೆಯಂತೆ ಮೊದಲು ಕೇಂದ್ರದ ಅಪ್ಪಣೆ ಪಡೆದುಕೊಂಡು ನಾವು ಘೋಷಣೆ ಮಾಡಬೇಕಿತ್ತಾ? ಇದು ಒಕ್ಕೂಟ ವ್ಯವಸ್ಥೆಗೆ ಸರಿಯಾದ ಕ್ರಮವಲ್ಲ ಎಂದು ಶೆಟ್ಟರ ನುಡಿದರು.

ಮೊದಲಿಗೆ ಅಕ್ಕಿ ನೀಡುವುದಾಗಿ ಭರವಸೆ ನೀಡಿ ಈಗ ರಾಜಕೀಯ ಕಾರಣಕ್ಕೆ ಅದನ್ನು ನಿರಾಕರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿಯನ್ನು ರಾಜ್ಯಕ್ಕೆ ನೀಡಬೇಕು ಎಂದು ಒತ್ತಾಯಿಸಿದರು. ಈ ನಡುವೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಚರ್ಚೆ ನಡೆಸಲು ಸಭೆ ನಡೆಸುತ್ತಿದ್ದಾರೆ.

ಸಂವಿಧಾನ ಬದ್ಧ ಹಾಗೂ ಒಕ್ಕೂಟ ವ್ಯವಸ್ಥೆಯಡಿ ಕಾಂಗ್ರೆಸ್ ಪಕ್ಷ ಕೇಂದ್ರದಿಂದ ಅಕ್ಕಿಯನ್ನು ಕೇಳುತ್ತಿದೆ. ಅದನ್ನು ಉಚಿತವಾಗಿ ಏನು ಕೇಳುತ್ತಿಲ್ಲ. ಹಣ ನೀಡುತ್ತೇವೆ ಎಂದರೂ ಸಹ ಅಕ್ಕಿ ನೀಡದೆ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಡಿ ವಿವಿಧ ರಾಜ್ಯಗಳಿಂದ ಆಹಾರ ಧಾನ್ಯಗಳನ್ನು ಪಡೆದುಕೊಂಡು ಎಫ್‌ಸಿಐ ಅಡಿ ಸಂಗ್ರಹಿಸುತ್ತದೆ. ಆ ರೀತಿ ಸಂಗ್ರಹವಾದ ಅಕ್ಕಿಯನ್ನು ನಾವು ಕೇಳುತ್ತಿದ್ದೇವೆ ಇಲ್ಲವಾದರೆ ಕೇಂದ್ರ ಸರ್ಕಾರ ಧಾನ್ಯಗಳ ಸಂಗ್ರಹ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿ ಬಿಡಲಿ ಎಂದರು

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚೆ ಮಾಡುತ್ತೇನೆ. ಈ ಭಾಗದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿವೆ, ಅವುಗಳನ್ನ ಆದಷ್ಟು ಬೇಗ ಪರಿಹಾರ ಮಾಡಲಿಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ. ರಾಜಕೀಯದಲ್ಲಿ ಬೇರೆ ಬೇರೆ ಅಧ್ಯಾಯಗಳಿರ್ತಾವೆ, ಇದು ನನ್ನ ಹೊಸ ಅಧ್ಯಾಯ, ಎರಡನೆಯ ಇನ್ನಿಂಗ್ಸ್ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ನಮ್ಮ ಪಕ್ಷದ ವರಿಷ್ಠರ ಜತೆಗೆ ಚರ್ಚೆ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಾನು ಸಿದ್ದನಿದ್ದೇನೆ. ಎಲ್ಲಿಯೇ ಪ್ರವಾಸ ಮಾಡಿ ಅಂದ್ರು ನಾನು ನನ್ನ‌ ಸಮಯವನ್ನ ಕೊಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಗೆಲ್ಲಲು ನಾನೂ ಪ್ರಯತ್ನ ಮಾಡ್ತೇನಿ. ಈ ಚುನಾವಣೆಯಲ್ಲಿ ನಿಮ್ಮ‌ ಉಪಯೋಗ ತೆಗೆದುಕೊಳ್ಳುತ್ತೆವೆ ಎಂದು ನಮ್ಮ‌ ಪಕ್ಷ ಹೇಳಿದೆ ಎಂದರು.

RELATED TOPICS:
English summary :We are not attracting defeated BJP candidates. There is a rift, resentment is being created

ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ
ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ
ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ
ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ
ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ
ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ
ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ
ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ
ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ
ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ
ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ
ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ
ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.
ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.
ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ
ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ
ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್
ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್
ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು
ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು
ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ನ್ಯೂಸ್ MORE NEWS...