Sat,Jun20,2026
ಕನ್ನಡ / English

ಪಕ್ಷದ ಸೋಲಿಗೆ ಕಾರಣರಾದ ನಳಿನ್ ಕುಮಾರ್ ಕಟೀಲ್ ಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ | JANATA NEWS

28 Jun 2023

ದಾವಣಗೆರೆ : ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಟೀಲ್ ನಾಯಕತ್ವದಲ್ಲೇ ಬಿಜೆಪಿ ಗೆ ರಾಜ್ಯದಲ್ಲಿ ಹೀನಾಯ ಸೋಲಾಗಿದ್ದರಿಂದ ಅಧ್ಯಕ್ಷ ಸ್ಥಾನ ಮುಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ, ಕೂಡಲೇ ರಾಜಿನಾಮೆ ಸಲ್ಲಿಸಬೇಕು ಎಂದು ರೇಣುಕಾಚಾರ್ಯ ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನ ಹಾಗು ವಿಪಕ್ಷ ನಾಯಕ ಆಯ್ಕೆ ಬಗ್ಗೆ ಚರ್ಚೆಯಾಗುತ್ತಿದ್ದು, ಈ ವಿಚಾರವಾಗಿ ಯಾವುದೇ ಪಕ್ಷದ ಘನತೆಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನೀಡಬಾರದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಖಡಕ್ ಸೂಚನೆ ಕೊಟ್ಟಿದ್ದಾರೆ.

ಆದರೂ ಇಂದು ಮಾತನಾಡಿದ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಹೀ‌ನಾಯವಾಗಿ ಸೋಲು ಕಂಡಿದೆ. ಇದರಿಂದ ಅವರು ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಬಹಿರಂಗಿಯೇ ಆಗ್ರಹಿಸಿದರು.

ಬಿಎಸ್​ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪ ವಿರುದ್ಧ ಮಾತಾಡಿದರೆ ಪಕ್ಷ ವಿರೋಧಿ ಅಲ್ಲವಾ? ಚುನಾವಣೆ ಪೂರ್ವದಲ್ಲಿ ಹತ್ತಾರು ಸಲ ಹೇಳಿದೆ. ಆದ್ರೆ ಕ್ರಮ‌ಕೈಗೊಳ್ಳಲಿಲ್ಲ. ಈ ಎಲ್ಲ ಕಾರಣಕ್ಕೆ ಬಿಜೆಪಿ ಹೀನಾಯ ಸೋಲು ಕಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಎಸ್ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವುದು ಕಟೀಲ್ ಗೆ ಆಗಲಿಲ್ಲ ಎಂದು ಹೇಳಿದ ಮಾಜಿ ಶಾಸಕ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಬೇಡವೆಂದರೂ ಕಟೀಲ್ ಮತ್ತು ಇತರ ನಾಯಕರು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ದಿವಂಗತ ಅನಂತ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಲಾಯಿತು ಎಂದು ರೇಣುಕಾಚಾರ್ಯ ಹೇಳಿದರು.

ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಿದ್ರಿ. ಆದ್ರೆ ಅವರ ಕೈ ಕಟ್ಟಿ ಹಾಕಿದ್ರಿ. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯವಿದೆ. ಮೊದಲು ನಳಿನ್ ಕುಮಾರ್ ಕಟೀಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತೊಮ್ಮೆ ಒತ್ತಾಯಿಸಿದರು.

RELATED TOPICS:
English summary :Nalin Kumar Kateel, who caused the party defeat, has no moral right to continue as president

ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ  - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
 ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
 ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ  ಭಾರತ
ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ ಭಾರತ

ನ್ಯೂಸ್ MORE NEWS...