Thu,Sep11,2025
ಕನ್ನಡ / English

ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಅನುಮಾನಸ್ಪದ ಸಾವು | JANATA NEWS

05 Jul 2023

ಚಿಕ್ಕಬಳ್ಳಾಫುರ : ಕಾಲೇಜ ಹಾಸ್ಟೆಲ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಸ್ಫದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಪ್ರೀತಿ(21) ಹಾಸ್ಟೆಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಪ್ರೀತಿ ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಪ್ರೀತಿ ಚಿಕ್ಕಬಳ್ಳಾಫುರ ನಗರ ಹೊರಹೊಲಯದ ಪ್ರತಿಷ್ಠಿತ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಇನ್ ಪಾರ್ಮಮೇಷನ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವಿದ್ಯಾಬ್ಯಾಸ ಮಾಡುತ್ತಿದ್ದಳು. ಕಾಲೇಜಿನ ಲೇಡಿಸ್ ಹಾಸ್ಟಲ್ ​ನಲ್ಲಿ ತಂಗಿದ್ದಳು, ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೀತಿ ಪತ್ತೆಯಾಗಿದೆ.

ಪ್ರೀತಿ, ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗಿರಲಿಲ್ಲ. ಹಾಸ್ಟಲ್​ನಲ್ಲಿಯೇ ಇದ್ದಳು. ಮೈಯಲ್ಲಿ ಹುಷಾರು ಇಲ್ಲ, ಆದ್ದರಿಂದ ಕಾಲೇಜಿಗೆ ಹೋಗಲ್ಲವೆಂದು ಹಾಸ್ಟಲ್ ವಾರ್ಡನ್ ಹಾಗೂ ಸ್ನೇಹಿತೆಗೆ ತಿಳಿಸಿದ್ದಾಳೆ. ಇದಾದ ಬಳಿಕ 12 ಗಂಟೆ ಸಮಯದಲ್ಲಿ ಆಕೆಯ ಸ್ನೇಹಿತೆ ಪ್ರೀತಿಗೆ ಹುಷಾರ್​ ಇರಲಿಲ್ಲ, ಹೇಗಿದ್ದಾಳೆ ಎಂದು ನೋಡಲು ಆಕೆಯ ರೂಮ್ ಬಳಿ ಹೋಗಿ ನೋಡಿದಾಗ, ಪ್ರೀತಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾಳೆ.

ಕೂಡಲೇ ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆದಾಗಲೇ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತಳ ಪೋಷಕರು ಸಹ ಏನಾಗಿದೆ ಎಂಬುದು ನಮಗೂ ಗೊತ್ತಿಲ್ಲ ಕಾಲೇಜಿನವರು ನಿಮ್ಮ ಮಗಳಿಗೆ ತುಂಬಾ ಹುಷಾರಿಲ್ಲ ಬೇಗ ಬನ್ನಿ ಅಂತ ಹೇಳಿದ್ರು . ನಾವ್ ಬಂದಾದ ಮೇಲೆ ಮೃತಪಟ್ಟಿದ್ದಾಳೆ ಎನ್ನುತ್ತಿದ್ದಾರೆ ಅಂತ ತಿಳಿಸಿದರು ಎಂದಿದ್ದಾರೆ. ಪೋಷಕರು ಅನುಮಾನ ವ್ಯಕ್ತಪಡಿಸಿ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.

RELATED TOPICS:
English summary :A student studying in an engineering college died suspiciously

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು  ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
11
11
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್  ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...