ಮೀನು ಹಿಡಿಯಲು ಹೋಗಿ ಯುವಕರಿಬ್ಬರು ನೀರುಪಾಲು | JANATA NEWS
ತುಮಕೂರು : ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಗುಬ್ಬಿಯ ಕಡಬಾ ಕೆರೆಯಲ್ಲಿ ನಡೆದಿದೆ.
ಯುವಕರು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಈ ದುರಂತ ನಡೆದಿದ್ದು, ಇಬ್ಬರು ಕೆರೆ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಹರೀಶ್(31) ಯೋಗೀಶ್ (36) ಕಣ್ಮರೆಯಾದ ಯುವಕರಾಗಿದ್ದು, ಗುಬ್ಬಿ ತಾಲ್ಲೂಕಿನ ಆಡುಗೊಂಡನಹಳ್ಳಿ ನಿವಾಸಿಗಳಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮುಳುಗಿರುವ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಶವಗಳು ಸಿಗುತ್ತಿದ್ದಂತೆ ಯುವಕರ ಕುಟುಂಬಸ್ಥರ ಶೋಕ ಮುಗಿಲು ಮುಟ್ಟಿದೆ.
English summary :Two young men went fishing and got water