Sat,Jun20,2026
ಕನ್ನಡ / English

ಅದು ಸಿದ್ದರಾಮಯ್ಯ ಅವರ ಸೊಸೆ/ಹೆಂಡತಿಗೆ ಆಗಿದ್ರೆ ಹೀಗೆ ಹೇಳ್ತಿದ್ರಾ? ಬಿಜೆಪಿ ಕಾರ್ಯಕರ್ತೆ ಬಂಧನ | JANATA NEWS

28 Jul 2023

ಉಡುಪಿ : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವ ಭರದಲ್ಲಿ ಸಿಎಂ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಟ್ವೀಟ್‌ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನಕ್ಕೊಳಗಾಗಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ.ಎಸ್ ಎಂಬವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣದ ಕುರಿತು ರಾಜ್ಯ ಕಾಂಗ್ರೆಸ್‌ ಮಾಡಿದ್ದ ಟ್ವೀಟ್ ವಿರೋಧಿಸುವ ಭರದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರು ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದರು

ಉಡುಪಿ ವಿಚಾರವಾಗಿ ಕಾಂಗ್ರೆಸ್ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಉಡುಪಿಯ ಕಾಲೇಜಿನಲ್ಲಿ 'ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ' ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ABVP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ?

ವಿದ್ಯಾರ್ಥಿನಿಯರ ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ, ಬಳಸಿಕೊಳ್ಳಲು ಉಪ್ಪು ಖಾರ, ಮಸಾಲೆಗಳನ್ನು ಬೆರಸಿ ಚಪ್ಪರಿಸಲು ಹೊರಟಿದ್ದ @BJP4Karnataka ಗೆ ನಮ್ಮ ದಕ್ಷಪೊಲೀಸರು ತಡಮಾಡದೆ ತನಿಖೆ ಮಾಡಿ ಸತ್ಯಾಂಶ ಬಯಲಿಗೆಳೆದು ನಿರಾಸೆ ಮೂಡಿಸಿದ್ದಾರೆ' ಎಂದು ಟ್ವೀಟ್ ಮಾಡಲಾಗಿತ್ತು.

ಈ ಟ್ವೀಟ್​ನಲ್ಲಿ ವಿದ್ಯಾರ್ಥಿನಿಯರ ಮಕ್ಕಳಾಟವನ್ನು, ಬಿಜೆಪಿ ರಾಜಕೀಯ ಕಳ್ಳಾಟವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್​ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ, ಕಾಂಗ್ರೆಸ್​ ಮಾಡಿದ್ದ ಟ್ವೀಟನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.

ಅದರಲ್ಲಿ ಅವರು 'ಇದನ್ನೆ ಸಿದ್ದರಾಮಯ್ಯ ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ.. @siddaramaiahನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಪೋತೀರಾ' ಎಂದು ಸಿಎಂ ವಿರುದ್ಧ ಕಿಡಿಕಾರಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು.

ಹನುಮಂತಯ್ಯ ಎಂಬ ಯುವ ಕಾಂಗ್ರೆಸ್​ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಐಪಿಸಿ ಸೆಕ್ಷನ್ 509 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

RELATED TOPICS:
English summary :Udupi video case: If it was Siddaramaiah daughter-in-law/wife, would you say this? BJP worker arrested

ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ  - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
 ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
 ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ  ಭಾರತ
ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ ಭಾರತ

ನ್ಯೂಸ್ MORE NEWS...