Tue,Aug04,2026
ಕನ್ನಡ / English

ಎಐಸಿಸಿ ಅಧ್ಯಕ್ಷರ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲು | JANATA NEWS

03 Aug 2023

ಕಲಬುರ್ಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಆರೋಪಿಸಿ ಕಾಂಗ್ರೆಸ್ ನಾಯಕರು ಹರಿ ಹಾಯ್ದಿದ್ದರು.

ಈ ಹಿನ್ನಲೆಯಲ್ಲಿ ಕಲಬುರ್ಗಿ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರುಟ್ವೀಟ್ ಮಾಡಿ, ಹೇಳಿಕೆಗಳನ್ನು ತಿರುಚಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸುವುದರಲ್ಲಿ ಕಾಂಗ್ರೆಸ್ಸಿನವರು ನಿಸ್ಸೀಮರು. ನಾನು ಉತ್ತರ ಕರ್ನಾಟಕದ ಬಿಸಿಲಿನ ತಾಪದ ಬಗ್ಗೆ ಉಲ್ಲೇಖ ಮಾಡಿ, ಅದಕ್ಕೆ ಖರ್ಗೆ ಅವರ ಉದಾಹರಣೆ ನೀಡಿದ್ದೇನೆ ಅಷ್ಟೇ. ಅರಣ್ಯ ಸಚಿವರಾಗಿರುವವರು ಹೆಚ್ಚಿನವರು ಆ ಭಾಗದ ಜನಪ್ರತಿನಿಧಿಗಳೇ ಆಗಿರುವುದರಿಂದ ಮಲೆನಾಡ ಜನಗಳ, ಇಲ್ಲಿನ ಮರಗಿಡಗಳ ಸಮಸ್ಯೆ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ವಿನಃ ಖರ್ಗೆ ಅವರ ಬಗ್ಗೆ ಯಾವುದೇ ಅವಹೇಳನ ಮಾಡಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಇಂತಹ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದನ್ನು ಕಾಂಗ್ರೆಸ್​ನವರು ನಿಲ್ಲಿಸಬೇಕು. ದಲಿತರನ್ನು ಗೌರವಿಸುವುದನ್ನು ಕಾಂಗ್ರೆಸ್​ನಿಂದ ನಾವು ಕಲಿಯಬೇಕಾಗಿಲ್ಲ. ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾಜ್ಯದ ಜನತೆ ದಡ್ಡರಲ್ಲ" ಎಂದು ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.

RELATED TOPICS:
English summary :Derogatory statement against AICC president: File a case against former home minister Araga Gyanendra

ಸಿಎಂ ವಿಜಯ್ ಮತ್ತು ನಟಿ ತ್ರಿಶಾ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು : ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ
ಸಿಎಂ ವಿಜಯ್ ಮತ್ತು ನಟಿ ತ್ರಿಶಾ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು : ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ
ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
 ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ
ಪಿಒಜೆಕೆಯಲ್ಲಿ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಖಂಡಿಸಿ, ಪಾಕಿಸ್ತಾನ ಬೆಂಬಲಿತ ಚುನಾವಣೆಗಳನ್ನು ತೋರಿಕೆಯ ವ್ಯಾಯಾಮ ಎಂದ ಭಾರತ
ಪಿಒಜೆಕೆಯಲ್ಲಿ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಖಂಡಿಸಿ, ಪಾಕಿಸ್ತಾನ ಬೆಂಬಲಿತ ಚುನಾವಣೆಗಳನ್ನು ತೋರಿಕೆಯ ವ್ಯಾಯಾಮ ಎಂದ ಭಾರತ
6 ಪ್ರಶ್ನೆ ಪತ್ರಿಕೆಗಳ ಸೋರಿಕೆ : ಪಂಜಾಬ್ ಸಚಿವರ ರಾಜೀನಾಮೆಗೆ ಎನ್‌ಡಿಎ ಸಂಸದರ ಆಗ್ರಹ; ಸಂಸತ್ತಿನಲ್ಲಿ ರಾಜಕೀಯ ಜಟಾಪಟಿ
6 ಪ್ರಶ್ನೆ ಪತ್ರಿಕೆಗಳ ಸೋರಿಕೆ : ಪಂಜಾಬ್ ಸಚಿವರ ರಾಜೀನಾಮೆಗೆ ಎನ್‌ಡಿಎ ಸಂಸದರ ಆಗ್ರಹ; ಸಂಸತ್ತಿನಲ್ಲಿ ರಾಜಕೀಯ ಜಟಾಪಟಿ
ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಅಧಿಕಾರದ ಕಾರ್ಯಪಡೆ ಘೋಷಿಸಿದ ಪ್ರಧಾನಿ ಮೋದಿ : ನೇತೃತ್ವ ವಹಿಸಲು ನಂದನ್ ನಿಲೇಕಣಿ ಆಯ್ಕೆ
ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಅಧಿಕಾರದ ಕಾರ್ಯಪಡೆ ಘೋಷಿಸಿದ ಪ್ರಧಾನಿ ಮೋದಿ : ನೇತೃತ್ವ ವಹಿಸಲು ನಂದನ್ ನಿಲೇಕಣಿ ಆಯ್ಕೆ
ಅಣೆಕಟ್ಟುಗಳ ಹೂಳೆತ್ತುವಿಕೆ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಕೇಂದ್ರದ ಬೆಂಬಲದ ಭರವಸೆ
ಅಣೆಕಟ್ಟುಗಳ ಹೂಳೆತ್ತುವಿಕೆ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಕೇಂದ್ರದ ಬೆಂಬಲದ ಭರವಸೆ
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆ ಮುಂದೂಡಿಕೆ
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆ ಮುಂದೂಡಿಕೆ

ನ್ಯೂಸ್ MORE NEWS...