Thu,Sep11,2025
ಕನ್ನಡ / English

ಗುತ್ತಿಗೆದಾರರ ಬಿಲ್ ಬಾಕಿ, ತನಿಖೆಯಾಗದೆ ಗುತ್ತಿಗೆದಾರರ ಬಾಕಿ ಮೊತ್ತ ಪಾವತಿಸಲಾಗದು | JANATA NEWS

12 Aug 2023

ಮೈಸೂರು : ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಗುತ್ತಿಗೆದಾರರ ಬಿಲ್ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದಿದ್ದಾರೆ.

ಇಂದು ರಾಜ್ಯ ಮಟ್ಟದ ವಕೀಲರ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬ ಆಗಸ್ಟ್ 3, ಆಗಸ್ಟ್ 12 ಎಂಬ ಎರಡು ದಿನಾಂಕಗಳು ಕೂಡ ತಪ್ಪು. ಒಂದನ್ನು ನಮ್ಮ ಮೇಷ್ಟ್ರು ಬರೆಸಿದ್ದರು, ಮತ್ತೊಂದನ್ನು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಅನ್ನು ಬರೆಸಿದ್ದರು. ಈ ಎರಡು ದಿನಾಂಕಗಳು ಕೂಡ ತಪ್ಪು. ನನ್ನ ಜನ್ಮದಿನಾಂಕ ನನಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನನ್ನ ಹುಟ್ಟುಹಬ್ಬದ ದಿನಾಂಕದ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದರು.

ನಾವು ಹಿಂದೆ ಬಿಜೆಪಿಯವರ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕಿದೆ. ಹೀಗಿರುವಾಗ ಗುತ್ತಿಗೆದಾರರ ಬಿಲ್​ ಪಾವತಿಗೆ ಆತುರಪಟ್ಟರೆ ಹೇಗೆ, ತನಿಖೆಯಾಗದೆ ಬಾಕಿ ಮೊತ್ತವನ್ನು ಪಾವತಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್​ ಪಡೆದಿರುವ ಬಿಜೆಪಿಯವರಿಗೆ ನಮ್ಮ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇಲ್ಲ. ಅವರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.

ಶೇ. 40ರಷ್ಟು ಕಮಿಷನ್​ ಬಗ್ಗೆ ತನಿಖೆ ನಡೆಸದೆ ಗುತ್ತಿಗೆದಾರರಿಗೆ ಹೇಗೆ ಬಿಲ್ ಪಾವತಿಸಲು ಸಾಧ್ಯ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್​ಐಟಿಗೆ ಸೂಚಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ಲೋಪ ಎಸಗಿರುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದೇನೆ. ಎಲ್ಲರಿಗೂ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ ಎಂದರು.

RELATED TOPICS:
English summary :Contractor bill arrears, Contractor arrears are not payable without investigation

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು  ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
11
11
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್  ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...