Tue,Aug04,2026
ಕನ್ನಡ / English

ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ: ಚಂದ್ರಯಾನ-3 ಯಶಸ್ವಿ ಆಗಲಿದೆ, ಶ್ರಾವಣ ಮಾಸದ ಮಧ್ಯಂತರದಲ್ಲಿ... | JANATA NEWS

20 Aug 2023

ಬೆಳಗಾವಿ : ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಅವರು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ಆದರೆ, ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಲಕ್ಷಣಗಳಿವೆ, ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿ ಇದೆ ಎಂದು ಹೇಳಿದ್ದಾರೆ.

ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶವಾಗಲಿವೆ.

ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು ಎಂದು ಹೇಳಿದರು.

ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್​​ ಲ್ಯಾಂಡಿಂಗ್​ ಮಾಡಲು ಇಸ್ರೋ ಸಜ್ಜಾಗಿದೆ. ಮೊದಲ ಹಂತ ಡಿ ಬೂಸ್ಟಿಂಗ್​​​​ ಕಾರ್ಯಾಚರಣೆಯೂ ಯಶಸ್ವಿಯಾಗಿತ್ತು. ಈಗ ಎರಡು ಹಂತದ ವೇಗ ತಗ್ಗಿಸುವ ಪ್ರಕ್ರಿಯೆಯೂ ಸಕ್ಸಸ್​ ​ಫುಲ್​​ ಆಗಿದೆ. ಭಾರತೀಯರ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದ್ದು, ಇದರ ಮಧ್ಯೆ ಭವಿಷ್ಯ ನುಡಿದಿರುವ ಕೋಡಿಶ್ರೀ, ಚಂದ್ರಯಾನ-3 ಯಶಸ್ವಿಯಾಗಿ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ.

ಪ್ರಾಕೃತಿಕ ದೋಷದಿಂದಲೇ ಸಾವು-ನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿದೆ, ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ. ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ತಿನ್ನುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ? ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ‌ ಹೆಚ್ಚಿತ್ತು, ಈಗ ಆಳವಾಗಿ ಬೋರವೆಲ್ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗುತ್ತಿವೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

RELATED TOPICS:
English summary :Kodishree Makes Explosive Prediction: Chandrayaan-3 Will Be Successful, Between Shravan Month...

ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
 ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ
ಪಿಒಜೆಕೆಯಲ್ಲಿ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಖಂಡಿಸಿ, ಪಾಕಿಸ್ತಾನ ಬೆಂಬಲಿತ ಚುನಾವಣೆಗಳನ್ನು ತೋರಿಕೆಯ ವ್ಯಾಯಾಮ ಎಂದ ಭಾರತ
ಪಿಒಜೆಕೆಯಲ್ಲಿ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಖಂಡಿಸಿ, ಪಾಕಿಸ್ತಾನ ಬೆಂಬಲಿತ ಚುನಾವಣೆಗಳನ್ನು ತೋರಿಕೆಯ ವ್ಯಾಯಾಮ ಎಂದ ಭಾರತ
6 ಪ್ರಶ್ನೆ ಪತ್ರಿಕೆಗಳ ಸೋರಿಕೆ : ಪಂಜಾಬ್ ಸಚಿವರ ರಾಜೀನಾಮೆಗೆ ಎನ್‌ಡಿಎ ಸಂಸದರ ಆಗ್ರಹ; ಸಂಸತ್ತಿನಲ್ಲಿ ರಾಜಕೀಯ ಜಟಾಪಟಿ
6 ಪ್ರಶ್ನೆ ಪತ್ರಿಕೆಗಳ ಸೋರಿಕೆ : ಪಂಜಾಬ್ ಸಚಿವರ ರಾಜೀನಾಮೆಗೆ ಎನ್‌ಡಿಎ ಸಂಸದರ ಆಗ್ರಹ; ಸಂಸತ್ತಿನಲ್ಲಿ ರಾಜಕೀಯ ಜಟಾಪಟಿ
ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಅಧಿಕಾರದ ಕಾರ್ಯಪಡೆ ಘೋಷಿಸಿದ ಪ್ರಧಾನಿ ಮೋದಿ : ನೇತೃತ್ವ ವಹಿಸಲು ನಂದನ್ ನಿಲೇಕಣಿ ಆಯ್ಕೆ
ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಅಧಿಕಾರದ ಕಾರ್ಯಪಡೆ ಘೋಷಿಸಿದ ಪ್ರಧಾನಿ ಮೋದಿ : ನೇತೃತ್ವ ವಹಿಸಲು ನಂದನ್ ನಿಲೇಕಣಿ ಆಯ್ಕೆ
ಅಣೆಕಟ್ಟುಗಳ ಹೂಳೆತ್ತುವಿಕೆ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಕೇಂದ್ರದ ಬೆಂಬಲದ ಭರವಸೆ
ಅಣೆಕಟ್ಟುಗಳ ಹೂಳೆತ್ತುವಿಕೆ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಕೇಂದ್ರದ ಬೆಂಬಲದ ಭರವಸೆ
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆ ಮುಂದೂಡಿಕೆ
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆ ಮುಂದೂಡಿಕೆ
 ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕುನಾಲ್ ಕಮ್ರಾ, ವಾಂಗ್‌ಚುಕ್ ಮತ್ತು ಡಿಪ್ಕೆ ವಿರುದ್ಧ ದೂರು ದಾಖಲು
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕುನಾಲ್ ಕಮ್ರಾ, ವಾಂಗ್‌ಚುಕ್ ಮತ್ತು ಡಿಪ್ಕೆ ವಿರುದ್ಧ ದೂರು ದಾಖಲು

ನ್ಯೂಸ್ MORE NEWS...