Sat,Mar21,2026
ಕನ್ನಡ / English

ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ: ಲಕ್ಷ್ಮೀ ಹೆಬ್ಬಾಳಕರ್ | JANATA NEWS

27 Aug 2023

ಮೈಸೂರು : ಆಗಸ್ಟ್ 30 ರಂದು ಮೈಸೂರಿನಲ್ಲಿ ಚಾಲನೆ ಸಿಗಲಿರುವ 'ಗೃಹಲಕ್ಷ್ಮಿ' ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಕಾರ್ಯಕ್ರಮದ ಸಂಬಂಧ ಪೂರ್ವ ಸಿದ್ಧತಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಭಾಗವಹಿಸಿದರು.

ಕಾಂಗ್ರೆಸ್ ಪಕ್ಷ ಯಾವತ್ತೂ ಹೃದಯದಿಂದ ವಿಚಾರ ಮಾಡುವ ಪಕ್ಷ. ಗ್ಯಾರಂಟಿ ಯೋಜನೆಗಳ ಮೂಲಕ ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದ್ದೇವೆ. ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.

'ಗೃಹಲಕ್ಷ್ಮಿ' ಯೋಜನೆಯ ಉದ್ಘಾಟನೆ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಶನಿವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಬೆಳಗಾವಿಯಿಂದ ಮೈಸೂರಿಗೆ ಬಂದು ಈ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸರಕಾರ 5 ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರಕಾರ ಎನಿಸಿದೆ, ಸಿದ್ದರಾಮಯ್ಯ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ.

ಡಿಕೆ.ಶಿವಕುಮಾರ ಅವರು ಅಪ್ರತಿಮ ಸಂಘಟಕ ಎನಿಸಿಕೊಂಡಿದ್ದಾರೆ. ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಹೆಬ್ಬಾಳಕರ್ ಹೇಳಿದರು.

ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ. ಹಾಗಾಗಿಯೆ ಇಂದಿರಾ ಗಾಂಧಿ, ದೇವರಾಜ ಅರಸ ಅಂತವರನ್ನು ಇಂದಿಗೂ ಸ್ಮರಿಸುತ್ತೇವೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವದಲ್ಲಿ ವಿಶ್ವಾಸವಿಟ್ಟು ನಾವು ನಡೆಯುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ 100 ದಿನದಲ್ಲಿ ಇಂತಹ ಒಳ್ಳೆಯ ಬಜೆಟ್ ಕೊಟ್ಟು ಯಾವುದೇ ಅಡಚಣೆ ಮಾಡದೆ ಬಹಳ ಚೆನ್ನಾಗಿ ನಿರ್ವಹಣೆ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದಾರೆ ಎಂದು ಹೇಳಿದರು.

1.28 ಕೋಟಿ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ತಲುಪುತ್ತದೆ. ಈಗಾಗಲೆ 1.10 ಕೋಟಿ ಕುಟುಂಬಗಳು ನೊಂದಾಯಿಸಿಕೊಂಡಿವೆ. ಇನ್ನೂ ಸುಮಾರು 18 ಲಕ್ಷ ಕುಟುಂಬಗಳ ರೇಶನ್ ಕಾರ್ಡ್ ತಾಂತ್ರಿಕ ಕಾರಣದಿಂದ ಅಪ್ ಗ್ರೇಡ್ ಆಗಿಲ್ಲ. ಆದಾದರೆ ಇನ್ನೂ 18 ಲಕ್ಷ ಕುಟುಂಬಗಳು ಲಾಭ ಪಡೆಯುತ್ತವೆ. ಇದಕ್ಕೆ ಸಮಯ ಮಿತಿಯ ಇಲ್ಲ. ಯಾವಾಗ ಬೇಕಾದರೂ ರಜಿಸ್ಟ್ರೇಶನ್ ಮಾಡಿಕೊಳ್ಳಬಹುದು. ರಾಜ್ಯದ ಮೂಲೆ ಮೂಲೆಯ ಮಹಿಳೆಯರ ಸಬಲೀಕರಣ ನಮ್ಮ ಉದ್ದೇಶವಾಗಿದೆ.

ರಾಜ್ಯದ ಎಲ್ಲ ಭಾಗಗಳ ಮಹಿಳೆಯರ ಸಮಸ್ಯೆಗಳೂ ಒಂದೇ ಆಗಿದೆ. ತಿಂಗಳಿಡೀ ಪಾತ್ರೆ ತೊಳೆಯಲು ಹೋದರೂ 1,500 ರೂ ಕೊಡ್ತಾರೆ. ಉದ್ಯೋಗ ಖಾತ್ರಿಯಲ್ಲಿ 100 ದಿನ ಬೆವರು ಸುರಿಸಿ ಕೆಲಸ ಮಾಡಿದರೆ 30 ಸಾವಿರ ರೂ. ಸಿಗುತ್ತದೆ. ಕಾಂಗ್ರೆಸ್ ಉದ್ದೇಶ ತಿಂಗಳಿಗೆ 2 ಸಾವಿರ ರೂ, ವರ್ಷಕ್ಕೆ 24 ಸಾವಿರ ರೂ. ಕೊಡುವುದಾಗಿದೆ. ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಪಕ್ಷ ಎಂದು ಅವರು ವಿವರಿಸಿದರು.

ಶಾಲೆಯೊಂದರಲ್ಲಿ ಮಗುವಿಗೆ ಮೊಟ್ಟೆ ವಿತರಿಸಿದ ಭಾವನಾತ್ಮಕ ಸಂದರ್ಭವೊಂದನ್ನು ಸಚಿವರು ಈ ವೇಳೆ ಸ್ಮರಿಸಿದರು. ಮೊಟ್ಟೆ ಪಡೆದ ಮಗು ತನ್ನ ಅಜ್ಜಿಗೂ ಒಂದು ಮೊಟ್ಟೆ ಕೊಡಿ ಎಂದು ಕೇಳಿದ ಪ್ರಸಂಗವನ್ನು ಉಲ್ಲೇಖಿಸಿದರು.

ಬಿಜೆಪಿಯವರು ನಾಲ್ಕಾಣೆ ಕೋಳಿಗೆ ಹನ್ನೆರಡಣೆ ಮಸಾಲೆ ಅರೀತಾರ. ನಾವು ಹಾಗಲ್ಲ. ಮಹಿಳೆಯರಿಗೆ ಶಕ್ತಿ ಕೊಡಲು ಈ ಎಲ್ಲ ಯೋಜನೆಗಳನ್ನು ತಂದಿದ್ದೇವೆ. ಪುರುಷರು ತಮಗೆ ಸಿಗುತ್ತಿಲ್ಲ ಎಂದು ಗೊಣಗಬೇಡಿ. ನಾವು 5 ಸಾವಿರ ವರ್ಷದಿಂದ ಅನುಭವಿಸಿದ್ದೇವೆ. ಈ ಯೋಜನೆಗಳಿಂದ ಪುರುಷರ ಜೇಬಿನಲ್ಲಿರುವ ಹಣವೂ ಉಳಿಯುತ್ತವೆ. ನಿಮಗೂ ಲಾಭ ಸಿಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿ ಈ ಕಾರ್ಯಕ್ರಕಮ ಮಾಡುವ ಅವಕಾಶ ಸಿಕ್ಕಿದೆ. ನನ್ನ ಪರಿಚಯವನ್ನು ಈ ಭಾಗದಲ್ಲೂ ಮಾಡಿಕೊಳ್ಳಲು ಸಿಕ್ಕಿರುವ ಅವಕಾಶ ಇದು. ನಾನು ಎಲ್ಲದರಲ್ಲೂ ಪೊಸಿಟಿವ್ ಹುಡುಕುವವನು. ಹಾಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಹೆಬ್ಬಾಳಕರ್ ಹೇಳಿದರು.

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಮಹದೇವಪ್ಪ, ಶಾಸಕರ ಕೆ.ಹರೀಶ್ ಗೌಡ, ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ಉಸ್ತುವಾರಿ ರೋಜಿ ಜಾನ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಸುನೀತಾ ವೀರಪ್ಪ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್ ನಾಥ್, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯದ ಕುಮಾರ್, ಮೈಸೂರು ನಗರ‌ ಘಟಕದ ಅಧ್ಯಕ್ಷ ಆರ್.ಮೂರ್ತಿ‌,‌ ಮಾಜಿ ಮೇಯರ್ ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ‌ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED TOPICS:
English summary :Congress party thinks from the heart: Lakshmi Hebbalkar

ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
 ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ  ಇರಾನ್
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ ಇರಾನ್
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ

ನ್ಯೂಸ್ MORE NEWS...