ಗಂಡ ಹೆಂಡತಿ ಆತ್ಮಹತ್ಯೆಗೆ ಶರಣು! | JANATA NEWS

ಬಳ್ಳಾರಿ : ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ ಬಂಡಿಹಟ್ಟಿಯಲ್ಲಿ ನಡೆದಿದೆ.
ಬಳ್ಳಾರಿಯ ನಗರದ ಬಂಡಿಹಟ್ಟಿ ಯಲ್ಲಿ ಘಟನೆ ನಡೆದಿದ್ದು, ಈರಣ್ಣ(28) ಪತ್ನಿ ದುರ್ಗಮ್ಮ(25) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿಯಾಗಿದ್ದಾರೆ.
ಕುಡಿತದ ಚಟಕ್ಕೆ ದಾಸನಾಗಿದ್ದ ಈರಣ್ಣ ಮೈತುಂಬಾ ಸಾಲ ಮಾಡಿಕೊಂಡಿದ್ದನು. ಸಾಲ ವಸೂಲಿಗೆ ಹಲವರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದರು. ಜೊತೆಗೆ, ಪತ್ನಿ ಕೆಲಸಕ್ಕೆ ಹೋಗಿ ಮಗು ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದಳು. ಪತ್ನಿಯ ಬಳಿ ಕುಡಿತಕ್ಕಾಗಿ ಹಣಕ್ಕಾಗಿ ಇನ್ನಿಲ್ಲದೆ ಪೀಡಿಸಿ ದೈಹಿಕ ಹಲ್ಲೆಯನ್ನೂ ಮಾಡುತ್ತಿದ್ದನು. ಇದರಿಂದ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದಾಳೆ. ಇದನ್ನ ನೋಡಿ ಹೆದರಿ ಈರಣ್ಣ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಭಂದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.