Wed,May06,2026
ಕನ್ನಡ / English

ಯಾವ ಸಮುದಾಯವನ್ನು ನಾನು ರಾಜಕೀಯ ಸ್ವರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ | JANATA NEWS

01 Oct 2023

ರಾಮನಗರ : ಯಾವ ಸಮುದಾಯವನ್ನು ನಾನು ರಾಜಕೀಯ ಸ್ವರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಎಚ್​ಡಿಕೆ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಘೋಷಣೆ ಮಾಡಿದರು.

ರಾಮನಗರದ ಮಣ್ಣಲ್ಲಿಯೇ ನಾನು ಮಣ್ಣಗೋದು, ಈ ಮಣ್ಣಿನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ಈ ನಾಡಿನ ಋಣ ತೀರಿಸುತ್ತೇನೆ. ದೇವೇಗೌಡರ 91ನೇ ವಯಸ್ಸಿನಲ್ಲಿ ಪಕ್ಷಕ್ಕೆ ಏನು ಆಘಾತ ಆಗಿದೆ, ಅದನ್ನು ಅವರು ಯೋಚನೆ ಮಾಡುತ್ತಿದ್ದಾರೆ. ಕಾವೇರಿ ಬಗ್ಗೆ ಏನು ಅನ್ಯಾಯ ಆಗಿದೆ, ಅದನ್ನು ನಾನು ಸರಿ ಮಾಡುತ್ತೇನೆ. ಈ ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದು ಆಗುತ್ತದೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕು, ಅದನ್ನು ಮಾಡುತ್ತೇನೆ.

ಜಲಧಾರೆಯಲ್ಲೂ ಇದಕ್ಕೆ ಪರಿಹಾರ ಇದೆ, ಜನರು ಅವಕಾಶ ಕೊಡಲಿಲ್ಲ. ಈ ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶ ಅಲ್ಲ. ನೀರಾವರಿ ಅನ್ಯಾಯ ಸರಿ ಮಾಡುವುದೇ ನನ್ನ ಗುರಿ. ಇದೇ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ನೀರಾವರಿ ಯೋಜನೆಗಳಿಗೆ ಪರಿಹಾರ ಮಾಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಿ, ಕೆಲ ಕಾಂಗ್ರೆಸ್‌ ನಾಯಕರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಬಾಂಧವರ ಬಗ್ಗೆ ನಮ್ಮ ಕಮಿಟ್‌ಮೆಂಟ್‌ ಏನು ಅಂತ ಎಲ್ಲರಿಗೂ ಗೊತ್ತು. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಮುಂದಿನ ಒಂದು ತಿಂಗಳ ಒಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡಲಿದ್ದೇವೆ. ಪಕ್ಷದ ಮುಖಂಡರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್‌ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಈ ಬಗ್ಗೆ ಮುಕ್ತವಾಗಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಯಾವ ಮುಖಂಡನ ರಾಜಕೀಯ ಮಸಕು ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರ ಹಿತ ಕಾಯುವುದು ನಮ್ಮ ಬದ್ಧತೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಾನು ಪ್ರಾಮಾಣಿಕವಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಇನ್ನು ಮೇಲೆ ಮಾತನ್ನು ಕಡಿಮೆ ಮಾಡಿ, ಕೆಲಸದ ಕಡೆ ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.

RELATED TOPICS:
English summary :I have not used any community for political gain

ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ
ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ
ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ
ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ
ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ
ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ
ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ
ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ
ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ
ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ
ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ
ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ
ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.
ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.
ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ
ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ
ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್
ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್
ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು
ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು
ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ನ್ಯೂಸ್ MORE NEWS...