ಸಿಎಂ ಸಿದ್ದರಾಮಯ್ಯ ರನ್ನು ಮಹಾಭಾರತದ ದುರ್ಯೋಧನನ ಅಪ್ಪನಾದ ಧೃತರಾಷ್ಟ್ರ ಎಂದ ಬಿಜೆಪಿ | JANATA NEWS
ಬೆಂಗಳೂರು : ಮಹಾಭಾರತದಲ್ಲಿ ತನ್ನ ಪುತ್ರ ದುರ್ಯೋಧನನ ಮೇಲಿನ ಅಂದ ವ್ಯಾಮೋಹದಿಂದ ಅನ್ಯಾಯ ವೆಸೆಗುವ ಮೂಲಕ ಕುಖ್ಯಾತಿ ಪಡೆದ ದೃಷ್ಟಿ ಹೀನ ಧೃತರಾಷ್ಟ್ರ ರಾಜನೊಂದಿಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಹೋಲಿಕೆ ಮಾಡಿದೆ.
ಇತ್ತೀಚಿಗೆ ವೈರಲ್ ಆಗಿರುವ ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ವರ್ಗಾವಣೆಗೆ ಫೋನ್ ಕರೆ ಮಾಡಿ "ಹಲೋ ಅಪ್ಪಾ" ಎಂದ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡುತ್ತಿರುವ ಪರಿ:
▪️ಸ್ವಾತಂತ್ರ್ಯ ಇಲ್ವಾ?
▪️ಅಧಿಕಾರ ಇಲ್ವಾ?
▪️ಶ್ಯಾಡೋ ಸಿಎಂ ಅಲ್ವಾ?
▪️ಮುಖ್ಯಮಂತ್ರಿ ಮಗ ಅಲ್ವಾ?
▪️ಕ್ಷೇತ್ರ ನೋಡಿಕೊಳ್ಳ ಬಾರದ?
▪️ನನಗೆ ಕ್ಷೇತ್ರ ಬಿಟ್ಟು ಕೊಟ್ಟಿಲ್ವಾ?
ಧೃತರಾಷ್ಟ್ರನಿಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ..!