Tue,Jul16,2024
ಕನ್ನಡ / English

ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ | JANATA NEWS

02 Jul 2024
661

ನವದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅಗ್ನಿವೀರದಿಂದ ರೈತರ ಸಮಸ್ಯೆಯವರೆಗೂ ಸರ್ಕಾರವನ್ನು ಗುರಿ ಮಾಡಿದ್ದಾರೆ. ಈ ವೇಳೆ ರೈತರ ಬಗ್ಗೆ ಕೂಡ ಮಾತನಾಡಿದರು. ಸರಕಾರ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವರು, ಈ ರೀತಿಯ ಅಳತೆಯಿಲ್ಲದ ಹೇಳಿಕೆ ಇಲ್ಲಿ ನಡೆಯಬಾರದು ಎಂದು ಸ್ಪೀಕರ್‌ಗೆ ದೂರು ನೀಡಿದ್ದಾರೆ.

ಇದಾದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ರೈತರು ಎಂಎಸ್‌ಪಿಗೆ ಬೇಡಿಕೆ ಇಡುತ್ತಿದ್ದಾರೆ ಆದರೆ ಸರ್ಕಾರ ನೀಡುತ್ತಿಲ್ಲ, ಎಂದು ಆರೋಪಿಸಿದ್ದಾರೆ. ಇದಕ್ಕೆ ಉತ್ತರವಾಗಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, "ಇದು ಸಂಪೂರ್ಣ ತಪ್ಪು ಹೇಳಿಕೆ", ಎಂದಿದ್ದಾರೆ. ಅಲ್ಲದೇ, "ಆರೋಪ ಮಾಡುವುದಾದರೆ ಪರಿಶೀಲಿಸಿಕೊಳ್ಳಿ" ಎಂದು ಆಕ್ರೋಶದಿಂದ ಹೇಳಿದ್ದಾರೆ.

ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, "ಅವರು ಸದನದಲ್ಲಿ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ತಪ್ಪು ನಿರೂಪಣೆಯಾಗಿದೆ." ಎಂದು ಹೇಳಿದ್ದಾರೆ. ಅಲ್ಲದೇ, "ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ", ಎಂದು ಒತ್ತಾಯಿಸಿದ್ದಾರೆ.

ಸದನದಲ್ಲಿ ರಾಹುಲ್ ಗಾಂಧಿ ಆರೋಪದ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದು, "ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ" ಎಂದು ಹೇಳಿದರು. ಈಗ 14 ಖಾರಿಫ್ ಬೆಳೆಗಳ ದರ ನಿಗದಿ ಮಾಡಿದ್ದೇವೆ. ಅವರು ಸರ್ಕಾರದಲ್ಲಿದ್ದಾಗ ಎಷ್ಟು ಬೆಳೆಗಳಿಗೆ ಎಂಎಸ್‌ಪಿ ಲಭ್ಯವಿತ್ತು ಹೇಳಿ? ಆಗ ಸಂಗ್ರಹಣೆ ಕೂಡ ಆಗಿರಲಿಲ್ಲ," ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಆ ಸಮಯದಲ್ಲಿ ಎಷ್ಟು ಖರೀದಿ ಮಾಡಲಾಗಿದೆ? ಎಂದು ಶಿವರಾಜ್ ಸಿಂಗ್ ಚೌಹಾಣ್ ಕೇಳಿದರು. ಅಲ್ಲದೇ, "ಇಂದಿಗೂ ಸಹ, ಎಂಎಸ್‌ಪಿ ದರದಲ್ಲಿ ಬೆಳೆಗಳ ಸಂಗ್ರಹಣೆ ಮುಂದುವರೆದಿದೆ", ಎಂದು ಸದನಕ್ಕೆ ಕೃಷಿ ಸಚಿವರು ತಿಳಿಸಿದ್ದಾರೆ.

English summary :You are lying, Govt is buying from farmers at MSP rate - Agriculture Minister hits out at Rahul Gandhi

ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಏರಿಸಿದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಸಹ ಹೆಚ್ಚಳ
ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಏರಿಸಿದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಸಹ ಹೆಚ್ಚಳ
ಮುಸ್ಲಿಂ ಮಹಿಳೆಯರಿಗೆ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪು ಶರಿಯಾ ಕಾನೂನಿಗೆ ವಿರುದ್ಧ - ಅಖಿಲ ಭಾರತ ಮುಸ್ಲಿಂ ಮಂಡಳಿ
ಮುಸ್ಲಿಂ ಮಹಿಳೆಯರಿಗೆ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪು ಶರಿಯಾ ಕಾನೂನಿಗೆ ವಿರುದ್ಧ - ಅಖಿಲ ಭಾರತ ಮುಸ್ಲಿಂ ಮಂಡಳಿ
ಡರೋ ಮತ್ : ಯಾವ ಸಾಮಾಜಿಕ ಕೂಟದಲ್ಲಿ ಭಾಗವಹಿಸಿದ್ದೀರಾ ಹೇಳಲು ಭಯಪಡಬೇಡಿ ಡಿಕೆಶಿವಕುಮಾರ್ ಗೆ ಆರ್. ಅಶೋಕ ತರಾಟೆ
ಡರೋ ಮತ್ : ಯಾವ ಸಾಮಾಜಿಕ ಕೂಟದಲ್ಲಿ ಭಾಗವಹಿಸಿದ್ದೀರಾ ಹೇಳಲು ಭಯಪಡಬೇಡಿ ಡಿಕೆಶಿವಕುಮಾರ್ ಗೆ ಆರ್. ಅಶೋಕ ತರಾಟೆ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ : ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ : ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿ
ಇಂದಿರಾ ಗಾಂಧಿ ಹೆರಿದ್ದ ತುರ್ತು ಪರಿಸ್ಥಿತಿ : ಪ್ರತಿ ವರ್ಷ ಜೂನ್ 25ರಂದು ಸಂವಿಧಾನ ಹತ್ಯೆ ದಿವಸ್
ಇಂದಿರಾ ಗಾಂಧಿ ಹೆರಿದ್ದ ತುರ್ತು ಪರಿಸ್ಥಿತಿ : ಪ್ರತಿ ವರ್ಷ ಜೂನ್ 25ರಂದು ಸಂವಿಧಾನ ಹತ್ಯೆ ದಿವಸ್
ಮುಡಾ ಹಗರಣದಿಂದ ಸಿದ್ದರಾಮಯ್ಯರನ್ನು ರಕ್ಷಣೆ ಮಾಡಲು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ - ಡಾ.ಅಶ್ವತನಾರಾಯಣ
ಮುಡಾ ಹಗರಣದಿಂದ ಸಿದ್ದರಾಮಯ್ಯರನ್ನು ರಕ್ಷಣೆ ಮಾಡಲು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ - ಡಾ.ಅಶ್ವತನಾರಾಯಣ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಬಿ.ನಾಗೇಂದ್ರ ಬಂಧಿಸಿದ ಇಡಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಬಿ.ನಾಗೇಂದ್ರ ಬಂಧಿಸಿದ ಇಡಿ
ಮುಸ್ಲಿಂ ಮಹಿಳೆಯರಿಗೆ ಪತಿಯಿಂದ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ  ದೆಹಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷೆ
ಮುಸ್ಲಿಂ ಮಹಿಳೆಯರಿಗೆ ಪತಿಯಿಂದ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ದೆಹಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷೆ
ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ : 2ನೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ?
ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ : 2ನೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ?
ಪರಿಹಾರವನ್ನು ಯುದ್ಧಭೂಮಿಯಲ್ಲಿ ಕಂಡುಹಿಡಿಯಲಾಗುವುದಿಲ್ಲ, ಭಾರತವು ಶಾಂತಿಯ ಕಡೆ - ರಷ್ಯಾ ಅಧ್ಯಕ್ಷ ಪುಟಿನ್ ಗೆ ತಿಳಿಸಿದ ಪ್ರಧಾನಿ ಮೋದಿ
ಪರಿಹಾರವನ್ನು ಯುದ್ಧಭೂಮಿಯಲ್ಲಿ ಕಂಡುಹಿಡಿಯಲಾಗುವುದಿಲ್ಲ, ಭಾರತವು ಶಾಂತಿಯ ಕಡೆ - ರಷ್ಯಾ ಅಧ್ಯಕ್ಷ ಪುಟಿನ್ ಗೆ ತಿಳಿಸಿದ ಪ್ರಧಾನಿ ಮೋದಿ

ನ್ಯೂಸ್ MORE NEWS...